Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಭಾನುವಾರ, ಸೆಪ್ಟೆಂಬರ್ 19, 2010

ಓ ಹೆಣ್ಣೇ!



ಅಂತರಾತ್ಮದಲ್ಲಿ ಅರಳಿ ಬರುವ ಗುಲಾಬಿಯೂ ನೀನಾದೆ
ಮನದೊಡಲಲ್ಲಿ ಉಕ್ಕಿಬರುವ ಜ್ವಾಲಾಮುಖಿಯೂ ನೀನಾದೆ
ಕಾಮನ ಬಿಲ್ಲಲಿ ಮೂಡಿಬರುವ ಬಣ್ಣವೂ ನೀನಾದೆ
ಪ್ರಕೃತಿಯ ಸೌಂದರ್ಯಕ್ಕೆ ರಾಣಿಯೂ ನೀನಾದೆ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!

ವರ್ಣಿಸುವ ಕವಿಯ ಕವಿತೆಗೆ ಕಲ್ಪನೆಯಾಗುವವಳೇ
ಶಿಲ್ಪಿಯ ಕೈಯಲ್ಲಿ ಆರಳುವ ಶಿಲೆಗೆ ಜೀವವಾಗುವವಳೇ
ಪ್ರಕೃತಿಯ ಜೀವಕ್ಕೆ ಮೊದಲ ಮಾತಾದವಳೇ
ಕಲಿಯುವ ಜೀವಕ್ಕೆ ಕಲಿಸುವ ಜ್ಞಾನಿಯಾಗುವವಳೇ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!

ಉಳಿವು ನೀನೇ ಅಳಿವು ನೀನೇ
ಮೊಹವು ನೀನೇ ಮೊಹಿನಿಯು ನೀನೇ
ಕದಿಯಲಾಗದ ಕನಸು ನೀನೇ ನನಸು ನೀನೇ
ಆನಂದವು ನೀನೇ ಅಸೊಯೆಯು ನೀನೇ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!

ನನ್ನೀ ಜೀವದ ಉಸಿರಿಗೆ ಜಿವದಾತೆಯಾಗಿ
ನನ್ನೊಲವಿನ ಪ್ರೀತಿಗೆ ಪ್ರೇಯಸಿಯಾಗಿ
ನನ್ನಾ ಮೋಹದ ಸಾಕ್ಷಿಗೆ ಮಗಳಾಗಿ
ಸಂಬಂದದ ಸಿಹಿಗೆ ಅಕ್ಕ-ತಂಗಿಯಾಗಿ
ನನಗೆ ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!
           
                - ಹಳ್ಳಿ ಹುಡುಗ ತರುಣ್
tharunkumar84@gmail.com

ಓ ಹೆಣ್ಣೇ, ಬಹಳ ದಿನಗಳ ಹಿಂದೆ ಬರೆದಿದ್ದೆ, ಆದರೆ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿರಲಿಲ್ಲ,ಇಂದು ಪ್ರಕಟಿಸುವ ಮನಸಿನಿಂದ ಪ್ರಕಟಿಸುತಿದ್ದೇನೆ, ಈ ಕವಿತೆಯನ್ನು ಕೇಳಿರುವ-ಕಂಡಿರುವ ಸ್ನೇಹಿತರು ವಿನಹ ತಿಳಿಯಬಾರದೆಂದು ಕೇಳಿಕೊಳ್ಳುತೆನೇ...  

ಗುರುವಾರ, ಸೆಪ್ಟೆಂಬರ್ 9, 2010

ಜಾಲಿ ಮೂಡಿನಲ್ಲಿ ಬಾಲೆ ಬಂದಳು ..



ಅಂದ ಚಂದದಂತ ಉಡುಗೆ ತೊಟ್ಟು
ಅಸೆಯನ್ನು ಕಣ್ಣಲಿಟ್ಟು, 
ಅಂಕು ಡೊಂಕು ಹೆಜ್ಜೆಯಾಕುತ್ತ
ಮೋಹದಂತ ನಗುವ ಬೀರಿ
ಜಾಲಿ ಮೂಡಿನಲ್ಲಿ ಬಾಲೆ ಬಂದಳು ...

ಬಸ್ಸಿನಲ್ಲಿ ಕುತಾ ಎಳೆಯ ಹೃದಯ
ಒಮ್ಮೆ ಝಲ್ ಎಂದಿತು, ಹಲ್ಲ ಕಿರಿಯುತಾ..

ಅಕ್ಕ-ಪಕ್ಕ ನೋಡಲಿಲ್ಲ,
ತನ್ನ ಮೇಲೆ ಜ್ಞಾನವಿಲ್ಲ, 
ಅಂಗೊಪಾಂಗಗಳ ತೊರಿಸುತ್ತ
ನಿಧ ನಿಧಾನವಗಿ
ಜಾಲಿ ಮೂಡಿನಲ್ಲಿ ಬಾಲೆ ಬಂದಳು ...

ಬಸ್ಸಿನಲ್ಲಿ ಕುತಾ ಎಳೆಯ ಹೃದಯ
ವಿಧ ವಿಧಾನವಗಿ ಖುಷಿಯಲಿ ಕುಣಿಯಿತು..

ಪಟ-ಪಟ ಮಾತನಾಡುತ್ತ, ಕಟ್ಟಕಡೆಯ 
ತುಟಿತುದಿಯ ತುಂಟ ನಗೆಯ ಬೀರುತಾ
ಗಡಿ ಮೀರಿ ಬಸ್ಸು ಹೊರಡೊ ಮೊದಲೆ
ಜಾಲಿ ಮೂಡಿನಲ್ಲಿ ಬಾಲೆ ಹೊರಟುಹೊದಳು.

ಬಸ್ಸಿನಲ್ಲಿ ಕುತಾ ಎಳೆಯ ಹೃದಯ
ಇಂಗು ತಿಂದ ಮಂಗನಂತೆ ಪೆಚ್ಚಾಯಿತು....
                              
                          - ಹಳ್ಳಿ ಹುಡುಗ ತರುಣ್
                                       tharunkumar84@gmail.com

ಭಾನುವಾರ, ಸೆಪ್ಟೆಂಬರ್ 5, 2010

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |

                  
                      
                 "ಗುರು" ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು, ಎಂದರೆ ಇದನ್ನು ಕೇಳಿದ ತಕ್ಷಣವೇ ನಮ್ಮ ತಲೆ ಗೌರವದಿಂದ ಸ್ವಯಂ ಆಗಿ ಬಾಗುತ್ತದೆ. ಗುರುವು ದೂರ ಮಾಡಿದರೂ ತನ್ನ ಒಳಮನಸ್ಸು ಸ್ವೀಕರಿಸಿದ್ದವರನ್ನೇ ಗುರುವೆಂದು ಪರಿಭಾವಿಸಿಕೊಂಡು, ಏಕಾಗ್ರತೆಯಿಂದ ಬಿಲ್ವಿದ್ಯೆ ಸಾಧಿಸಿ, ಗುರುದಕ್ಷಿಣೆಯಾಗಿ ಕೊಂಬೆರಳು ಕತ್ತರಿಸಿದ ಗುರುಭಕ್ತಿಯನ್ನು ನಾವು ಕಂಡಿದ್ದೆವೆ. 
                 ಎಲ್ಲೋ ದಟ್ಟ ಹಳ್ಳಿಯೊಂದರಲ್ಲಿ ಸೌಕರ್ಯವೂ ಇಲ್ಲದ ಶಾಲೆಯಲ್ಲಿ ಎಲ್ಲಾ ನೋವು ನುಂಗಿಕೊಂಡು, ತನ್ನನ್ನೇ ನೆಚ್ಚಿಕೊಂಡು ಬಂರುವ ನಮ್ಮಂತಹ ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆದು, ನಮ್ಮ ಭವಿಷ್ಯ ಉಜ್ವಲವಾಗಿಸುವಲ್ಲೇ ಸಂತೋಷ ಕಾಣುತ್ತಿರುವರು ನಮ್ಮಗೆ ವಿಧ್ಯಾ ಕಲಿಸಿದ ಗುರುಗಳಗೆ, ಹಸಿ ಮಣ್ಣಿನಂತೆ ಇದ್ದ ನಮ್ಮ ಮನಸ್ಸನ್ನು ತನ್ನೆರಡು ಕೈಗಳಿಂದ ಆದರದಿಂದ ತಟ್ಟಿ, ತಟ್ಟಿ ಸುಂದರವಾದ, ಕಲಾತ್ಮಕವಾದ ವಿಗ್ರಹದಂತೆ ನಮ್ಮೆಲ್ಲರ ಜೀವನ ರೂಪಿಸಿದ ನಮ್ಮ ಗುರುಗಳಿಗೆ, ಸಮಸ್ತಾ ಗುರು ಕುಲಕ್ಕೆ, ಶಿರಬಾಗಿ ನಮಿಸೋಣ ಕ್ಷಣ ಕ್ಷಣವು ನೆನೆಯೋಣ ಕಣ್ಣುಗಳ ತೆರೆಸಿದ ಗುರುಗಳಿಗೆ ಶಿಕ್ಷಕರ ದಿನ ಶುಭಾಸಯಗಳು. 


  ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಚಿನ್ಮಯಂ ವ್ಯಾಪಿ ಯತ್ಸರ್ವಂ ತ್ರೈಲೋಕ್ಯಂ ಸಚರಾಚರಮ್
ತತ್ಪಾದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಅನೇಕಜನ್ಮಸಂಪ್ರಾಪ್ತ ಕರ್ಮಬಂಧ ವಿದಾಹಿನೇ
ಅತ್ಮಜ್ಞಾನಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||

ಮನ್ನಾಥಃ ಶ್ರೀಜಗನ್ನಾಥೋ ಮದ್ಗುರುಃ ಶ್ರೀಜಗದ್ಗುರುಃ
ಮದಾತ್ಮ ಸರ್ವ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ||

ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್
ದ್ವಂದ್ವಾತೀತಂ ಗಗನಸದ್ರುಶಂ ತತ್ವಮಸ್ಯಾದಿಲಕ್ಶ್ಯಮ್
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷೀಭೂತಮ್
ಭಾವಾತೀತಮ್ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||

ನಿತ್ಯಂ ಶುದ್ಧಂ ನಿರಾಕಾರಂ ನಿರಾಭಾಸಂ ನಿರಂಜನಮ್
ನಿತ್ಯಬೋಧಂ ಚಿದಾನಂದಂ ಗುರುಂ ಬ್ರಹ್ಮ ನಮಾಮ್ಯಹಮ್ ||
                                                                                             (ಮೂಲ: ನನಗೆ ದೊರೆತಿದ್ದು ಕುವೆಂಪುರವರ ಬೆರಳ್ ಗೆ ಕೊರಳ್ ನಲ್ಲಿ)


ಶುಕ್ರವಾರ, ಸೆಪ್ಟೆಂಬರ್ 3, 2010

ಮಳೆ ಬಂತು ನಮ್ಮೂರಲ್ಲಿ


ಬೆಳದಿಂಗಳ ಬೆಳಕಿನಲಿ
ಪಟ-ಪಟ ಹನಿಯ ಸದ್ದಿನಲಿ
ಮಳೆ ಬಂತು ನಮ್ಮೂರಲ್ಲಿ
ಮಲಗಿದ್ದೆ ನಾ ರಾತ್ರಿಯಲಿ..||

ಹೆಂಚಿನ ಮನೆಯ ಹಂಚಿನಲಿ
ಕಾರುತ್ತಿಹ ಹನಿ ನೀರಲ್ಲಿ,
ಕತ್ತಲೆಯ ಕೊಣೆಯಿಂದ ಬೆಳಕಿನ ಹೆಜ್ಜೆಯನ್ನಾರಸಿ
ನಾನೆದ್ದು ಹೊರ ಬಂದೆ ರಾತ್ರಿಯಲಿ..||

ಹರಿಯುವ ನೀರನ್ನು ನೋಡುತ
ಕನಸಿನ ಕಲ್ಪನೆಗಳ ಕಣ್ಣಲ್ಲೆ
ಕಟ್ಟುತ್ತಾ, ನಿಂತಿದ್ದೆ ನಾ ಬಾಗಿಲಲ್ಲೆ
ಸುರಿಯುವ ಮಳೆಯ ರಾಗದಲಿ.. ||

ಒಮ್ಮೆಲೆ ಆಕಾಶದಿಂದ ಕಣ್ಣು 
ಕೊರೈಸುವ ಮಿಂಚೊಂದು ಮಿಂಚಿ
ಮಾಯವಗುತಿರೇ ಸಿಡಿಲೋಂದು ಬಡೆದು
ಬೆಚ್ಚಿದ ನಾ ಹೊಡಿ ಕೊಣೆಯ ಸೆರಿದೆ ರಾತ್ರಿಯಲಿ.. ||

ಕಣ್ಣು ಮುಚ್ಚುವ ಮೊದಲು,ಮನಸೆಲ್ಲ 
ತಂಪಾಯಿತು ವರುಣನ ಆರ್ಭಟದಲಿ
ಮಳೆ ಬಂತು ನಮ್ಮೂರಲ್ಲಿ
ಮಲಗಿದ್ದೆ ನಾ ರಾತ್ರಿಯಲಿ..||
                      
                       - ಹಳ್ಳಿ ಹುಡುಗ ತರುಣ್
           tharunkumar84@gmail.com