Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಭಾನುವಾರ, ಸೆಪ್ಟೆಂಬರ್ 5, 2010

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |

                  
                      
                 "ಗುರು" ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು, ಎಂದರೆ ಇದನ್ನು ಕೇಳಿದ ತಕ್ಷಣವೇ ನಮ್ಮ ತಲೆ ಗೌರವದಿಂದ ಸ್ವಯಂ ಆಗಿ ಬಾಗುತ್ತದೆ. ಗುರುವು ದೂರ ಮಾಡಿದರೂ ತನ್ನ ಒಳಮನಸ್ಸು ಸ್ವೀಕರಿಸಿದ್ದವರನ್ನೇ ಗುರುವೆಂದು ಪರಿಭಾವಿಸಿಕೊಂಡು, ಏಕಾಗ್ರತೆಯಿಂದ ಬಿಲ್ವಿದ್ಯೆ ಸಾಧಿಸಿ, ಗುರುದಕ್ಷಿಣೆಯಾಗಿ ಕೊಂಬೆರಳು ಕತ್ತರಿಸಿದ ಗುರುಭಕ್ತಿಯನ್ನು ನಾವು ಕಂಡಿದ್ದೆವೆ. 
                 ಎಲ್ಲೋ ದಟ್ಟ ಹಳ್ಳಿಯೊಂದರಲ್ಲಿ ಸೌಕರ್ಯವೂ ಇಲ್ಲದ ಶಾಲೆಯಲ್ಲಿ ಎಲ್ಲಾ ನೋವು ನುಂಗಿಕೊಂಡು, ತನ್ನನ್ನೇ ನೆಚ್ಚಿಕೊಂಡು ಬಂರುವ ನಮ್ಮಂತಹ ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆದು, ನಮ್ಮ ಭವಿಷ್ಯ ಉಜ್ವಲವಾಗಿಸುವಲ್ಲೇ ಸಂತೋಷ ಕಾಣುತ್ತಿರುವರು ನಮ್ಮಗೆ ವಿಧ್ಯಾ ಕಲಿಸಿದ ಗುರುಗಳಗೆ, ಹಸಿ ಮಣ್ಣಿನಂತೆ ಇದ್ದ ನಮ್ಮ ಮನಸ್ಸನ್ನು ತನ್ನೆರಡು ಕೈಗಳಿಂದ ಆದರದಿಂದ ತಟ್ಟಿ, ತಟ್ಟಿ ಸುಂದರವಾದ, ಕಲಾತ್ಮಕವಾದ ವಿಗ್ರಹದಂತೆ ನಮ್ಮೆಲ್ಲರ ಜೀವನ ರೂಪಿಸಿದ ನಮ್ಮ ಗುರುಗಳಿಗೆ, ಸಮಸ್ತಾ ಗುರು ಕುಲಕ್ಕೆ, ಶಿರಬಾಗಿ ನಮಿಸೋಣ ಕ್ಷಣ ಕ್ಷಣವು ನೆನೆಯೋಣ ಕಣ್ಣುಗಳ ತೆರೆಸಿದ ಗುರುಗಳಿಗೆ ಶಿಕ್ಷಕರ ದಿನ ಶುಭಾಸಯಗಳು. 


  ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ ||

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ |
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಚಿನ್ಮಯಂ ವ್ಯಾಪಿ ಯತ್ಸರ್ವಂ ತ್ರೈಲೋಕ್ಯಂ ಸಚರಾಚರಮ್
ತತ್ಪಾದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ ||

ಅನೇಕಜನ್ಮಸಂಪ್ರಾಪ್ತ ಕರ್ಮಬಂಧ ವಿದಾಹಿನೇ
ಅತ್ಮಜ್ಞಾನಪ್ರದಾನೇನ ತಸ್ಮೈ ಶ್ರೀಗುರವೇ ನಮಃ ||

ಮನ್ನಾಥಃ ಶ್ರೀಜಗನ್ನಾಥೋ ಮದ್ಗುರುಃ ಶ್ರೀಜಗದ್ಗುರುಃ
ಮದಾತ್ಮ ಸರ್ವ ಭೂತಾತ್ಮಾ ತಸ್ಮೈ ಶ್ರೀಗುರವೇ ನಮಃ ||

ಬ್ರಹ್ಮಾನಂದಂ ಪರಮಸುಖದಂ ಕೇವಲಂ ಜ್ಞಾನಮೂರ್ತಿಮ್
ದ್ವಂದ್ವಾತೀತಂ ಗಗನಸದ್ರುಶಂ ತತ್ವಮಸ್ಯಾದಿಲಕ್ಶ್ಯಮ್
ಏಕಂ ನಿತ್ಯಂ ವಿಮಲಮಚಲಂ ಸರ್ವಧೀಸಾಕ್ಷೀಭೂತಮ್
ಭಾವಾತೀತಮ್ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ ||

ನಿತ್ಯಂ ಶುದ್ಧಂ ನಿರಾಕಾರಂ ನಿರಾಭಾಸಂ ನಿರಂಜನಮ್
ನಿತ್ಯಬೋಧಂ ಚಿದಾನಂದಂ ಗುರುಂ ಬ್ರಹ್ಮ ನಮಾಮ್ಯಹಮ್ ||
                                                                                             (ಮೂಲ: ನನಗೆ ದೊರೆತಿದ್ದು ಕುವೆಂಪುರವರ ಬೆರಳ್ ಗೆ ಕೊರಳ್ ನಲ್ಲಿ)


9 ಕಾಮೆಂಟ್‌ಗಳು:

Manju M Doddamani ಹೇಳಿದರು...

chanangide maga

ತಸ್ಮೈ ಶ್ರೀಗುರವೇ ನಮಃ |

prabhamani nagaraja ಹೇಳಿದರು...

ಗುರುವಿನ ಮಹತ್ವವನ್ನು ಸಾರುವ ಉತ್ತಮ ಶ್ಲೋಕಗಳನ್ನು ಸ೦ಗ್ರಹಿಸಿ ನೀಡಿದ್ದೀರಿ. ಉತ್ತಮ ಲೇಖನ. ಧನ್ಯವಾದಗಳು. ನಾನೂ 'ಶಿಕ್ಷಕರ ದಿನ'ದ ಬಗ್ಗೆ ಬರೆದಿದ್ದೇನೆ. ಒಮ್ಮೆ ಬ್ಲಾಗ್ ಗೆ ಭೇಟಿ ಕೊಡಿ.

ಹಳ್ಳಿ ಹುಡುಗ ತರುಣ್ ಹೇಳಿದರು...

manju mattu prabhamani yavarige ಧನ್ಯವಾದಗಳು

Gubbachchi Sathish ಹೇಳಿದರು...

ಗುರುವಿಗೆ ಗುರುವೇ ಸಾಟಿ.

ತುಂಬಾ ಓದುತ್ತೀರಾ ಅನ್ಸುತ್ತೆ. ನಂಗೆ ಹೊಟ್ಟೆಹುರಿ ಶುರುವಾಗಿದೆ.

Ittigecement ಹೇಳಿದರು...

ತರುಣ್..

ಗುರುವಿನ ಗುಲಾಮನಾಗದ ತನಕ ದೊರೆದಣ್ಣ ಮುಕುತಿ...
ಎಂದಿದ್ದಾರೆ ನಮ್ಮ ಹಿರಿಯರು..

ವಿದ್ಯಾ ದದಾತಿ ವಿನಯಮ್..
ನಿದ್ರಾ ದದಾತಿ ಸುಖಮ್..

ಗುರುವು ಜ್ಞಾನ, ಮುಕ್ತಿಕೊಡುವ ದೀಪ..
ಗುರುವಂದನೆ ನಮ್ಮ ಆದ್ಯ ಕರ್ತವ್ಯ..

ನಿಮ್ಮ ಬ್ಲಾಗ್ ಇಷ್ಟವಾಯಿತು...

ಅಭಿನಂದನೆಗಳು..

ಹಳ್ಳಿ ಹುಡುಗ ತರುಣ್ ಹೇಳಿದರು...

thanks ಗುಬ್ಬಚ್ಚಿ ಸತೀಶ್..

howdu hage swalpa samaya sikkaga pustakagale nannna girl friends galu.. :)

ಹಳ್ಳಿ ಹುಡುಗ ತರುಣ್ ಹೇಳಿದರು...

thanks prakash (ಸಿಮೆಂಟು ಮರಳಿನ ಮಧ್ಯೆ ) sir..
nivu namam blog visit maadirodokke nanage tumba kushi agtide sir...

V.R.BHAT ಹೇಳಿದರು...

ತರುಣ್ , ಗುರುವಿಗೆ ತಲೆಬಾಗದವ ತನ್ನ ಅರಿವಿನ ಮಟ್ಟವನ್ನು ತಿಳಿಯದವ, ಗುರುವಿಲ್ಲದೇ ಜ್ಞಾನ ಲಭಿಸುವುದಿಲ್ಲ, ಗುರುವಿನ ಮೂಲ ಶ್ರೀಮನ್ನಾರಾಯಣ! ಹೀಗಾಗಿ ಗುರು ಧ್ಯಾನ ದೇವರ ಧ್ಯಾನವೇ ಸರಿ, ನಿಮ್ಮ ಪ್ರಸ್ತುತಿ ಬಹಳ ಸಮರ್ಪಕ. ಥ್ಯಾಂಕ್ಸ್

ಹಳ್ಳಿ ಹುಡುಗ ತರುಣ್ ಹೇಳಿದರು...

thanks sir for ur comments.