Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಶುಕ್ರವಾರ, ಜನವರಿ 14, 2011

ನೀನ್ಯಾರೆ.. ?



ಮಿಂಚಿನಂತೆ ಅಂಚಿನಲ್ಲೇ ಬಂದು 

ಮೂರು ಲೋಕ ತಣಿಸುವಂ ನೋಟ ಬೀರಿ   

ಕೊಂಚವೂ ನಾಚದೇ  ಹೃದಯ ಹೊಕ್ಕು

ನಿನ್ನ ರೂಪವನ್ನು ಕಣ್ಣ ತುಂಬ ಕಟ್ಟಿ ಹೋದ   

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?


ಕಣ್ಣ ಮುಂದೆ ನಲಿಯುತಿರುವ  

ನವಿಲು ಗರಿಯ ರೂಪದಂಥ 

ಕಪ್ಪು ಕೂದಲನ್ನು ಮೆಲ್ಲ ಸರಿಸುವಂತೆ 

ಓರೆಗಣ್ಣಿನಲ್ಲೇ ಮನಕ್ಕೆ ಮುತ್ತು ಕೊಟ್ಟು ಹೋದ    

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?


ಭಾವ ಹೃದಯ ತಟ್ಟಿ, ಒಲುಮೆ-ಚಿಲುಮೆ ಹುಟ್ಟಿ 

ಹುಟ್ಟೊ ಗುಟ್ಟು ತಿಳಿಸಿ, ಮನಸಿನಲ್ಲೇ ಕವನ ಬರೆಸಿ

ರೆಪ್ಪೆ ತುಂಬಾ ಕಾಡುವಂಥ ಕನಸ ಬೆಳೆಸಿ

ಕೇಳದೆ ಮಾಯ ಜಿಂಕೆಯಂತೆ ಹಾರಿಹೋದ

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?


ಕೆಂದಾವರೆಯಂಥ ಮುದ್ದು ಕೆನ್ನೆ ಹೊತ್ತು

ಹಿಗ್ಗಿದ ಹೂವಂಥ ನೀಳ ನಾಸಿಕ ತೊಟ್ಟು

ಸೂರ್ಯ ಕಿರಣದಂಥ ಕಣ್ಣ ನೋಟದಲ್ಲೇ

ಮನಸ ನಾಟುವಂಥ ಈಟಿ ಬಿಟ್ಟು ಹೋದ

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?

                                                 - ಹಳ್ಳಿ ಹುಡುಗ ತರುಣ್         
                                                 - tharunkumar84@gmail.com

ನಮ್ಮ ಸಹ ಜೀತಗಾರರಾದ ದೀಪಕ್ ತಾವು bike ನಲ್ಲಿ office ಗೆ ಬರುವಾಗ ನೋಡಿದ ಒಂದು ಸುಂದರ ಹೆಣ್ಣಿನ ಬಗ್ಗೆ ಹೇಳಿ, ಬರೆಯುವಂತೆ ಪ್ರೆರೇಪಿಸಿದಾಗ ಮೂಡಿ ಬಂದ ಒಂದೆರಡು ಸಾಲುಗಳು ನಿಮ್ಮ ಮುಂದೆ..... ತಪ್ಪಿದ್ದರೆ ದಯವಿಟ್ಟು ತಿಳಿಸಿ.

ತಪ್ಪುಗಳನ್ನು ತಿದ್ದಿ-ಸಲಹೆ ಕೊಟ್ಟ ಜಲನಯನ ಅಜಾದ್ ಸರ್ ಗೆ ಧನ್ಯವಾದಗಳು....

21 ಕಾಮೆಂಟ್‌ಗಳು:

balasubramanya ಹೇಳಿದರು...

ಭಾವ ಹೃದಯ ತಟ್ಟಿ, ಒಲುಮೆ-ಚಿಲುಮೆ ಹುಟ್ಟಿ

ಹುಟ್ಟೊ ಗುಟ್ಟು ತಿಳಿಸಿ, ಮನಸಿನಲ್ಲೇ ಕವನ ಬರೆಸಿ

ರೆಪ್ಪೆ ತುಂಬಾ ಕಾಡುವಂತ ಕನಸ ಬೆಳೆಸಿ

ಕೇಳದೆ ಮಾಯ ಜಿಂಕೆಯಂತೆ ಹಾರಿಹೋದ

ಬೆಳ್ಳಿಯಂತ ಬೆಡಗಿ- ಕಾಡುವಂತ ಹುಡುಗಿ ನೀನ್ಯಾರೆ.. ? ಕವಿತೆಯಲ್ಲಿ ಇಷ್ಟದ ಸಾಲುಗಳು. ಈ ಕವಿತೆ ಹುಟ್ಟಲು ಕಾರಣಳಾದ ಆ ಹುಡುಗಿಗೆ ಹಾಗು ನಿಮಗೆ ಜೈ.ಹೋ

Gubbachchi Sathish ಹೇಳಿದರು...

ಕವನ ಬರೆಯಲು ಪ್ರೇರೆಪಿಸಿದ ಗೆಳೆಯ, ಆ ಹುಡುಗಿ, ಬರೆದ ನೀವು... ಕವನ ಹುಟ್ಟಲು ಹಲವು ಕಾರಣ. ಕವಿಗೆ ಇನ್ನೇನು ಕೆಲಸ? ಚೆನ್ನಾಗಿದೆ ತರುಣ್. ನಿಮ್ಮ ಟೋಪಿಯ ಬಗ್ಗೆ ಒಂದು ಕವನ ಬರೆಯಿರಿ.

ಹಳ್ಳಿ ಹುಡುಗ ತರುಣ್ ಹೇಳಿದರು...

danyavaadagalu baalu sir..

ಹಳ್ಳಿ ಹುಡುಗ ತರುಣ್ ಹೇಳಿದರು...

ಗುಬ್ಬಚ್ಚಿ ಸತೀಶ್ danyavadagalu nimma commentsge...

munde kandita topi baggenu bareyalu praytinisuttene...

Manju M Doddamani ಹೇಳಿದರು...

Maga Super :)

avalu yaaru anta gottu Neenyare anta matte kelta idiya :)

ಅಪ್ಪ-ಅಮ್ಮ(Appa-Amma) ಹೇಳಿದರು...

ತರುಣ್,

ಕವನ ಇಷ್ಟವಾಯ್ತು.
ಕವನ ಹುಟ್ಟುವ ಸಮಯದ ಹಿನ್ನಲೆ ಚೆನ್ನಾಗಿದೆ :)

ಈ ಸಾಲುಗಳ ಅರ್ಥವೇನು..
ಹೊರೆಗಣ್ಣಿನಲ್ಲೇ ಮನಕ್ಕೆ ಮುತ್ತು ಕೊಟ್ಟ

SATISH N GOWDA ಹೇಳಿದರು...

tumba channagide tarun keep weiting

ಜಲನಯನ ಹೇಳಿದರು...

ತರುಣ್ ಚನ್ನಾಗಿದೆ...ಪ್ರಯತ್ನ ಮತ್ತು ಭಾವ..
ಹೌದು ನೀನ್ಯಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಿ...ಬೇಗ..ಅಂತ..ನನ್ನ ಹಾರೈಕೆ.

ಹಳ್ಳಿ ಹುಡುಗ ತರುಣ್ ಹೇಳಿದರು...

saanvi ya appa-amma danyavadagalu nanna kavana mechchidakke..

kshemishi sir adu spelling mistake agittu adake arta tappigide

correct one sir .. ಓರೆಗಣ್ಣಿನಲ್ಲೇ ಮನಕ್ಕೆ ಮುತ್ತು ಕೊಟ್ಟು ಹೋದ..

ಹಳ್ಳಿ ಹುಡುಗ ತರುಣ್ ಹೇಳಿದರು...

sathish tumba danyavadagalu kavan mechidakke..

ಹಳ್ಳಿ ಹುಡುಗ ತರುಣ್ ಹೇಳಿದರು...

azad sir danyavaadagalu sir..

tappannu tiddidakku mattu kavanavannu mechchidakke.....

thanks sir..

ಹಳ್ಳಿ ಹುಡುಗ ತರುಣ್ ಹೇಳಿದರು...

manju thanks maga..

Unknown ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Unknown ಹೇಳಿದರು...

thumba chennagide Tharun sir. nanganthu thumba esta aythu.

ಹಳ್ಳಿ ಹುಡುಗ ತರುಣ್ ಹೇಳಿದರು...

thnaks veda madam....danyavadagalu...

mate barta iri...

vivek p.c ಹೇಳಿದರು...

super guru.. ello hogbitte neenu.. yaaramma avalu :P

Ittigecement ಹೇಳಿದರು...

ತರುಣ..

ಮಸ್ತ್ ಆಗಿದೆ ಕವನ..

ನನ್ನೊಳಗಿನ
ಭಾವಗಳ
ಕದಡಿ..
ನವಿರಾದ
ರಾಗ ಹಾಡಿ..
ನವಿಲಿನಂಥಹ..
ಕನಸುಗಳ
ಕಟ್ಟುವೆಯಲ್ಲೆ.. ಹುಡುಗಿ...
ನೀನ್ಯಾರೆ...
ಬೆಡಗಿ...?

abhinandanegalu...

ಅದಮ್ಯಾಯುಷ್ಯ - adhamyaayushya ಹೇಳಿದರು...

ಪ್ರೋತ್ಸಾಹಕ್ಕೆ ಧನ್ಯವಾದಗಳು!
ಶುಭವಾಗಲಿ.
ಪ್ರೀತಿಯಿಂದ,
ಅದಮ್ಯಾಯುಷ್ಯ

Ashok ಹೇಳಿದರು...

ತುಂಬಾ ಚೆನ್ನಾಗಿದೆ ತರುಣ್ ...

ಗಿರೀಶ್.ಎಸ್ ಹೇಳಿದರು...

chennagide tarun...aa prashne bahala dina uliyade irali....

ಮೌನರಾಗ ಹೇಳಿದರು...

Chennagi barediddira...varnisiddiraa sir...
Nice..Download: eType1.com/f.php?FU00UI