Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಭಾನುವಾರ, ಅಕ್ಟೋಬರ್ 16, 2011

ಒಮ್ಮೆ ಬಂದು ಕೂಗಿ ಕರೆಯೆ..



ಸಮಯದ ಅಭಾವ ಮತ್ತು ಸೋಮಾರಿತನಕ್ಕೆ ಜೋತು ಬಿದ್ದು ಕಳೆದ ಕೆಲವು ದಿನಗಳಿಂದ  ಬ್ಲಾಗ್ ಕಡೆ ಬಂದಿರಲಿಲ್ಲ ಕ್ಷಮೆ ಇರಲಿ....
ಮಾತು ಬಾರದ ಮೂಕಯಾತನೆ 
ಮನವ ಕೊರೆದಿದೆ ಮೌನದಿಂದಲೆ
ಏನು ತಿಳಿಯದೆ ಯಾರಿಗು ಹೇಳದೆ
ಕೊರಗಿ ಕೂತಿದೆ ನಿನ್ನ ನೆನಪಲೆ...!!

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಮಳೆ-ಬೆಳೆಯಿಲ್ಲದೆ ಊರು ಬಿಟ್ಟ
ಮೇಲೆ ನೆಲೆಸುವ ಶಬ್ದಹೀನತೆಯಂತಹ
ಮನಸಿನ ಮೌನಕ್ಕೆ ಕರಗುತ್ತಿಹುದು 
ಕನಸಿನ ಕಲ್ಪನೆಯ ಲಹರಿ 

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಸೂರ್ಯನೆದುರಿಗೆ ಅರಳುವ ಮೊದಲು
ಕತ್ತಲಲ್ಲಿ ಮುದಡಿ ಕೂತಾ ಹೂವಿನಂತೆ
ಹರುಷ ತುಂಬಿದ ಮನಸು ಇಂದು
ಮುದಡಿ ಕೂತಿದೆ ಭಾವ ಕಳೆದು

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ದಿಕ್ಕು-ದಿಕ್ಕುಗಳೆತ್ತಲಿಂದಲೊ ಸುತ್ತುವರಿದ
ಕಪ್ಪು ಮೋಡದಂತೆ ಹೆಪ್ಪುಗಟ್ಟಿದ
ಮನಸಿನಯಾತನೆ ಸುರಿಯಲು ಒಪ್ಪದೆ
ನಿನ್ನ ಬರುವನೆ ಕಾದು ಕೂತಿದೆ 

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಆಕಾಶದತ್ತ ಮುಚ್ಚಿದ ಕಣ್ಣು 
ಕತ್ತಲಿನೊಂದಿಗೇ ಕರಗಿಹೋದ
ನಿನ್ನ ನೆನೆಯುತ ಮೆತ್ತ ಮೆತ್ತನೆ 
ಸುರಿಸುತಿಹುದು ನೆನಪಿನಹನಿಯ 

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಮಾತು ಬಾರದ ಮೂಕಯಾತನೆ  
ಮನವ ಕೊರೆದಿದೆ ಮೌನದಿಂದಲೆ....||

                                                            - ಹಳ್ಳಿ ಹುಡುಗ ತರುಣ್         
                                                            - tharunkumar84@gmail.com

ಇದು ಕೇವಲ ನನ್ನ ಕಲ್ಪನೆ, ಈ ಕವನಕ್ಕೂ ಮತ್ತು ನನ್ನ ಜೀವನಕ್ಕು ಯಾವುದೇ ಸಂಬಂದವಿಲ್ಲ......
ತಪ್ಪಿದ್ದರೆ ದಯವಿಟ್ಟು ತಿಳಿಸಿ...............


18 ಕಾಮೆಂಟ್‌ಗಳು:

Gubbachchi Sathish ಹೇಳಿದರು...

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

nice.

Ashok ಹೇಳಿದರು...

Tumba chennagide Tarun...

esp ee salugalu tumba ishtavaytu...

ದಿಕ್ಕು-ದಿಕ್ಕುಗಳೆತ್ತಲಿಂದಲೊ ಸುತ್ತುವರಿದ
ಕಪ್ಪು ಮೋಡದಂತೆ ಹೆಪ್ಪುಗಟ್ಟಿದ
ಮನಸಿನಯಾತನೆ ಸುರಿಯಲು ಒಪ್ಪದೆ
ನಿನ್ನ ಬರುವನೆ ಕಾದು ಕೂತಿದೆ...

ಚಿನ್ಮಯ ಭಟ್ ಹೇಳಿದರು...

ತುಂಬಾ ಭಾವನಾತ್ಮಕವಾಗಿದೆ..
ಪ್ರತಿ ನಾಲ್ಕೈದು ಸಾಲುಗಳಿಗೊಮ್ಮೆ ಬರುವ ಎರಡು ಸಾಲುಗಳು ಹೊಸತನ ಎನಿಸಿತು..
ಚೆನಾಗಿದೆ.. ಬರೆಯುತ್ತಿರಿ..

ಬನ್ನಿ ನಮ್ಮನೆಗೂ,
http://chinmaysbhat.blogspot.com/

ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್ಟ

sunaath ಹೇಳಿದರು...

ತರುಣ,
ಕವನ ಚೆನ್ನಾಗಿದೆ. ಕೆಲವು ಕಾಗುಣಿತದ ತಪ್ಪುಗಳಿವೆ. ದಯವಿಟ್ಟು ಸರಿಪಡಿಸಿ.
‘ಮೂಖಯಾತನೆ’ ಇದು ‘ಮೂಕಯಾತನೆ’ ಆಗಬೇಕು.
‘ಸೂರ್ಯನೇದುರಿಗೆ ಹರಳುವ’ ಇದು ‘ಸೂರ್ಯನೆದುರಿಗೆ ಅರಳುವ’ ಆಗಬೇಕು.
ಶುಭಾಶಯಗಳು.

ಹಳ್ಳಿ ಹುಡುಗ ತರುಣ್ ಹೇಳಿದರು...

mechidakke danyavadagalu ಗುಬ್ಬಚ್ಚಿ ಸತೀಶ್

ಹಳ್ಳಿ ಹುಡುಗ ತರುಣ್ ಹೇಳಿದರು...

danyavadagalu ಅಶೋಕ್

ಹಳ್ಳಿ ಹುಡುಗ ತರುಣ್ ಹೇಳಿದರು...

Danyavadagalu ಚಿನ್ಮಯ ಭಟ್..

kandita nimm ablog saha nanu bartine..

ಹಳ್ಳಿ ಹುಡುಗ ತರುಣ್ ಹೇಳಿದರು...

Danyavadagalu Sunaath....

tappanu sari padisukollutene.. nimma salehege tumba thanks

ಮೌನರಾಗ ಹೇಳಿದರು...

waw..ಒಮ್ಮೆ ಬಂದು ಕೂಗಿ ಕರೆಯೆ...||
chennagide..

Sunitha ಹೇಳಿದರು...

Thumba chennagide :)
You r back.

ಜಲನಯನ ಹೇಳಿದರು...

ಭಾವ ತುಂಬಿದ ಹೃದಯದಲಿ ಒಮ್ಮೆ ಕೂಗಿ ಕರೆಯೆ....
ಇದು ಭಾವ ತುಂಬಿದ ಕರೆಯೇ??
ಚನ್ನಾಗಿವೆ ಸಾಲುಗಳು...
ಅದ್ರಲ್ಲೂ
ಮಳೆ-ಬೆಳೆಯಿಲ್ಲದೆ ಊರು ಬಿಟ್ಟ
ಮೇಲೆ ನೆಲೆಸುವ ಶಬ್ದಹೀನತೆಯಂತಹ
ಮನಸಿನ ಮೌನಕ್ಕೆ ಕರಗುತ್ತಿಹುದು
ಕನಸಿನ ಕಲ್ಪನೆಯ ಲಹರಿ
ನಡೆಯಲಿ ಕವನ ಕೃಷಿ ಹೀಗೇ....

ಅನಾಮಧೇಯ ಹೇಳಿದರು...

nimma saalugalu ishata aaythu....

ಜಲನಯನ ಹೇಳಿದರು...

ತರುಣ್...
ಬಹಳ ದಿನಗಳ ನಂತರ ಒಳ್ಳೆ ಕವನ
ಅರ್ಥಪೂರ್ಣ ಸಾಲುಗಳು...
ಮಾತು ಬಾರದ ಮೂಕ ಯಾತನೆ ಮನವ ಕೊರೆದಿದೆ ಮೌನದಿಂದಲೆ.....ಬಹಳ ಅರ್ಥವತ್ತಾದ ಸಾಲುಗಳು

ಹಳ್ಳಿ ಹುಡುಗ ತರುಣ್ ಹೇಳಿದರು...

Danyavadagalu ಮೌನರಾಗ... madam mattu sunitha mechidakke

ಹಳ್ಳಿ ಹುಡುಗ ತರುಣ್ ಹೇಳಿದರು...

thanks ಸಿಂಧುಚಂದ್ರ madam namm kavan mechidakke..

ಹಳ್ಳಿ ಹುಡುಗ ತರುಣ್ ಹೇಳಿದರು...

ಜಲನಯನ -- thanks azad sir nimma prosahada mechchugege..

ಮನಮುಕ್ತಾ ಹೇಳಿದರು...

kavana chennaagide.

ಅಪ್ಪ-ಅಮ್ಮ(Appa-Amma) ಹೇಳಿದರು...

ತರುಣ್,

ನೀನ್ಯಾರೆ ಅಂತ ಇದ್ದವರು ಈಗ ಒಮ್ಮೆ ಬಂದು ಕೂಗಿ ಕರೆ ಅಂತಿದಿರಿ :)
Nice progress :)


ಕವನ ಚೆನ್ನಾಗಿದೆ