Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಸೋಮವಾರ, ನವೆಂಬರ್ 1, 2010

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...!.



"ತಾಯಿ ಕನ್ನಡತಿ ನಿನ್ನೊಳಿರುವ ಶಾಂತಿ ಸಹನೆ ಪ್ರೀತಿ ಕೊಡು ಎಲ್ಲರಿಗು ಎಲ್ಲರ ನುಡಿಯಾಗಲಿ ಕನ್ನಡ ಎಲ್ಲರ ನಡೆಯಾಗಲಿ ಕನ್ನಡ"


ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು...! 



ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಉತ್ತರದಲ್ಲಿ ಭೊರ್ಗರೆದು ಹರಿಯುತಿಹನು


ಕೃಷ್ಣನು, ಭೀಮ ಮಲಪ್ರಭ


ಘಟಪ್ರಭ ತುಂಗಭದ್ರೆಯ ಮಡುವಲ್ಲಿ, 


ಹೇಮಾವತಿ ಕಬಿನಿ ಕನ್ನಂಬಾಡಿ


ಒಡಲನ್ನು ತುಂಬಿ ತಣಿಸುತಿಹಳು


ದಕ್ಷಿಣದಲ್ಲಿ ಕನ್ನಡತಿಯ ಮಗಳು ಕಾವೇರಿ..!




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ನಂದ, ಮಯೂರ, ಕದಂಬ,


ಚಾಲುಕ್ಯ, ಹೊಯ್ಸಳ, ಮೈಸೂರು 


ವಿಜಯನಗರದರಾಸರಾಳಿದ ಕಲೆಯ ಬೀಡು, 


ರನ್ನ ಪೊನ್ನ ಪಂಪರ ಸಾಹಿತ್ಯದ 


ನಾಡಿದು, ಕುವೆಂಪು ಬೇಂದ್ರೆ ಕಾರಂತ


ಮಾಸ್ತಿಯರು ಆರಳಿಸಿದ ಕರುನಾಡಿದು..




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಮಲೆನಾಡ, ಕರಾವಳಿ, 


ಬಯಲು ಸೀಮೆಯ ನಡುವಲ್ಲಿ 


ಬೆಳಗುತಿಹ ಸಹ್ಯಾದ್ರಿಯ ಒಡಲು  


ಕೋಟಿ ಜೀವಿಗಳ ಮಡಿಲು ಕರುನಾಡು..




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಡೊಳ್ಳು ಕುಣಿತ ಕಂಸಾಳೆ


ವೀರಗಾಸೆ  ಕೋಲಾಟ


ಸೋಮನ ಕುಣಿತ ಯಕ್ಷಗಾನ


ಹಗಲು ವೇಷದಂತ ಜಾನಪದ ಕಲೆಗಳ 


ಸಂಸ್ಕೃತಿಯ ತವರುನಾಡು ಕನ್ನಡ ನಾಡು...!




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




ಗುಬ್ಬಿ ವೀರಣ್ಣ, ಕೈಲಾಸಂ 


ಕಾರಂತ,ಸುಬ್ಬಣ್ಣರ೦ತವರು


ಬೆಳೆಸಿದ ರಂಗಭೂಮಿಯ ನಾಡು


ಗಂಗೂಬಾಯಿ, ಭೀಮಸೇನ್ ಜೋಷಿ,


ಪುಟ್ಟರಾಜ್ ಗವಾಯಿರವರಂತ 


ಸಂಗೀತ ಮಾಂತ್ರೀಕರಿಂದ 


ತಣಿಸಿದ ಬೀಡು ಕರುನಾಡು..!




ನೋಡು ನೋಡಲ್ಲಿ ಬೆಳ್ಳಿಯಂತೆ


ಬೆಳಗುತ್ತಿರುವುದು ಬೆಳದಿಂಗಳ ನಾಡು


ಕರುನಾಡು, ಕನ್ನಡ ನಾಡು...!




                      - ಹಳ್ಳಿ ಹುಡುಗ ತರುಣ್
                         tharunkumar84@gmail.com




11 ಕಾಮೆಂಟ್‌ಗಳು:

SATISH N GOWDA ಹೇಳಿದರು...

tharun happu kannada rajyostava...

Shiv ಹೇಳಿದರು...

ತರುಣ್,

ಕನ್ನಡದ ಸಮಗ್ರ ವೈಭವವನ್ನು ವೈವಿಧತೆಯನ್ನು ನಿಮ್ಮ ಕವನದಲ್ಲಿ ಚೆನ್ನಾಗಿ ಸೆರೆಹಿಡಿಯಲಾಗಿದೆ.

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಹಳ್ಳಿ ಹುಡುಗ ತರುಣ್ ಹೇಳಿದರು...

ಶಿವು ಸರ್, ಸತೀಶ್ ಧನ್ಯವಾದಗಳು ಮತ್ತು ರಾಜ್ಯೋತ್ಸವದ ಶುಭಾಶಯಗಳು..

Gubbachchi Sathish ಹೇಳಿದರು...

ಇಡೀ ಕರ್ನಾಟಕವೇ ನಿಮ್ಮ ಕವನದಲ್ಲಿದೆ.
ಧನ್ಯವಾದಗಳು.

Manju M Doddamani ಹೇಳಿದರು...

ತುಂಬಾ ಅರ್ಥ ಪೂರ್ಣವಾಗಿದೆ ಕವನ

Roopa ಹೇಳಿದರು...

ವಾಹ್ ಸೊಗಸಾದ ಕವನ!! ಇಡೀ ಕರ್ನಾಟಕವನ್ನು ನಿಮ್ಮ ಕವನದಲ್ಲಿ ಪರಿಚಯಿಸಿದ್ದೀರ!
"ಎಲ್ಲರ ನುಡಿಯಾಗಲಿ ಕನ್ನಡ ಎಲ್ಲರ ನಡೆಯಾಗಲಿ ಕನ್ನಡ". ನವೆಂಬರ್ ತಿಂಗಳಿಗೆ ಮಾತ್ರ ಮೀಸಲಾಗದೆ ನಿತ್ಯವೂ ಕನ್ನಡವಾಗಲಿ ಎಂಬ ನಮ್ಮ ನಿಮ್ಮೆಲ್ಲರ ಆಶಯ ಈಡೇರಲಿ:)

ಹಳ್ಳಿ ಹುಡುಗ ತರುಣ್ ಹೇಳಿದರು...

ಸತೀಶ್ ಧನ್ಯವಾದಗಳು ಮತ್ತು ರಾಜ್ಯೋತ್ಸವದ ಶುಭಾಶಯಗಳು.

ಹಳ್ಳಿ ಹುಡುಗ ತರುಣ್ ಹೇಳಿದರು...

ಮಂಜು ಧನ್ಯವಾದಗಳು ಮತ್ತು ರಾಜ್ಯೋತ್ಸವದ
ಶುಭಾಶಯಗಳು ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು.

ಹಳ್ಳಿ ಹುಡುಗ ತರುಣ್ ಹೇಳಿದರು...

ವಸಂತ್ ಧನ್ಯವಾದಗಳು ಮತ್ತು ರಾಜ್ಯೋತ್ಸವದ ಶುಭಾಶಯಗಳು ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು.

ಹಳ್ಳಿ ಹುಡುಗ ತರುಣ್ ಹೇಳಿದರು...

ಪುಟ್ಟಿಯ ಅಮ್ಮ ಧನ್ಯವಾದಗಳು, ನಮ್ಮ ನಿಮ್ಮೆಲ್ಲರ ಅಶಯ ಈಡೆರುತ್ತೆ ಎಂಬ ನಂಬಿಕೆ ನಮ್ಮಲಿ ಇದ್ದರೆ ಕಂಡಿತ ನೆರವೇರುತ್ತೆ.

ನಿಮಗೆ ಮತ್ತು ಪುಟ್ಟಿಗೆ ರಾಜ್ಯೋತ್ಸವದ ಶುಭಾಶಯಗಳು ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು.

Ashok ಹೇಳಿದರು...

tumba chennagide tarun...