Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಭಾನುವಾರ, ನವೆಂಬರ್ 6, 2011

ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ.........

ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ


ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಹಲವು ಬಣ್ಣದ ದೇಹದ ತುಂಬ 
ಬಣ್ಣ ಬಣ್ಣದ ಬಟ್ಟನು ತೊಟ್ಟ ಚಿಟ್ಟೆ....||

ಹೂವಿಂದ ಹೂವಿಗೆ ಪಯಣಿಸುವ ಚಿಟ್ಟೆ
ನೋಡುವ ಕಣ್ಣಿಗೆ ನೀ ಕನಸಾಗಿ ಬಿಟ್ಟೆ....

ನಲಿ ನಲಿದಾಡುತ ಸವಿಯನು ಸವಿಯುವ ಚಿಟ್ಟೆ
ಬರೆಯುವ ಕೈಗಳಿಗೆ ನೀ ಕವಿತೆಯಾಗಿ ಬಿಟ್ಟೆ...

ತಳಿರು-ತೋರಣದಲ್ಲಿ ಹೊಮ್ಮಿಸುವ ಓಂಕಾರದ ಚಿಟ್ಟೆ
ಕೇಳುವ ಕಿವಿಗಳಿಗೆ ಸಂಗೀತದ ಅಲೆಯಾಗಿ ಬಿಟ್ಟೆ...

ಕ್ಷಣ-ಕ್ಷಣವು ಕಣ್ಮುಂದೆ ಮಾಯವಾಗುವ ಚಿಟ್ಟೆ
ಹುಡುಕುವ ಮನಸಿಗೆ ನೀ ಆಟವಾಗಿ ಬಿಟ್ಟೆ...

ನಿನ್ನನು ಹಿಡಿಯಲು ನಾ ಆಸೆ ಪಟ್ಟೇ
ನೀನು ನನ್ನ ಮನಸ್ಸನ್ನೇ ಕದ್ದು ಬಿಟ್ಟೆ
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ.......||
                                      
                                            - ಹಳ್ಳಿ ಹುಡುಗ ತರುಣ್         
                                                            - tharunkumar84@gmail.com

ತಪ್ಪಿದ್ದರೆ ದಯವಿಟ್ಟು ತಿಳಿಸಿ...............

ಭಾನುವಾರ, ಅಕ್ಟೋಬರ್ 16, 2011

ಒಮ್ಮೆ ಬಂದು ಕೂಗಿ ಕರೆಯೆ..



ಸಮಯದ ಅಭಾವ ಮತ್ತು ಸೋಮಾರಿತನಕ್ಕೆ ಜೋತು ಬಿದ್ದು ಕಳೆದ ಕೆಲವು ದಿನಗಳಿಂದ  ಬ್ಲಾಗ್ ಕಡೆ ಬಂದಿರಲಿಲ್ಲ ಕ್ಷಮೆ ಇರಲಿ....
ಮಾತು ಬಾರದ ಮೂಕಯಾತನೆ 
ಮನವ ಕೊರೆದಿದೆ ಮೌನದಿಂದಲೆ
ಏನು ತಿಳಿಯದೆ ಯಾರಿಗು ಹೇಳದೆ
ಕೊರಗಿ ಕೂತಿದೆ ನಿನ್ನ ನೆನಪಲೆ...!!

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಮಳೆ-ಬೆಳೆಯಿಲ್ಲದೆ ಊರು ಬಿಟ್ಟ
ಮೇಲೆ ನೆಲೆಸುವ ಶಬ್ದಹೀನತೆಯಂತಹ
ಮನಸಿನ ಮೌನಕ್ಕೆ ಕರಗುತ್ತಿಹುದು 
ಕನಸಿನ ಕಲ್ಪನೆಯ ಲಹರಿ 

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಸೂರ್ಯನೆದುರಿಗೆ ಅರಳುವ ಮೊದಲು
ಕತ್ತಲಲ್ಲಿ ಮುದಡಿ ಕೂತಾ ಹೂವಿನಂತೆ
ಹರುಷ ತುಂಬಿದ ಮನಸು ಇಂದು
ಮುದಡಿ ಕೂತಿದೆ ಭಾವ ಕಳೆದು

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ದಿಕ್ಕು-ದಿಕ್ಕುಗಳೆತ್ತಲಿಂದಲೊ ಸುತ್ತುವರಿದ
ಕಪ್ಪು ಮೋಡದಂತೆ ಹೆಪ್ಪುಗಟ್ಟಿದ
ಮನಸಿನಯಾತನೆ ಸುರಿಯಲು ಒಪ್ಪದೆ
ನಿನ್ನ ಬರುವನೆ ಕಾದು ಕೂತಿದೆ 

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಆಕಾಶದತ್ತ ಮುಚ್ಚಿದ ಕಣ್ಣು 
ಕತ್ತಲಿನೊಂದಿಗೇ ಕರಗಿಹೋದ
ನಿನ್ನ ನೆನೆಯುತ ಮೆತ್ತ ಮೆತ್ತನೆ 
ಸುರಿಸುತಿಹುದು ನೆನಪಿನಹನಿಯ 

ಭಾವ ತುಂಬಿದ ಹೃದಯದಲ್ಲಿ
ಒಮ್ಮೆ ಬಂದು ಕೂಗಿ ಕರೆಯೆ...||

ಮಾತು ಬಾರದ ಮೂಕಯಾತನೆ  
ಮನವ ಕೊರೆದಿದೆ ಮೌನದಿಂದಲೆ....||

                                                            - ಹಳ್ಳಿ ಹುಡುಗ ತರುಣ್         
                                                            - tharunkumar84@gmail.com

ಇದು ಕೇವಲ ನನ್ನ ಕಲ್ಪನೆ, ಈ ಕವನಕ್ಕೂ ಮತ್ತು ನನ್ನ ಜೀವನಕ್ಕು ಯಾವುದೇ ಸಂಬಂದವಿಲ್ಲ......
ತಪ್ಪಿದ್ದರೆ ದಯವಿಟ್ಟು ತಿಳಿಸಿ...............


ಶುಕ್ರವಾರ, ಜನವರಿ 14, 2011

ನೀನ್ಯಾರೆ.. ?



ಮಿಂಚಿನಂತೆ ಅಂಚಿನಲ್ಲೇ ಬಂದು 

ಮೂರು ಲೋಕ ತಣಿಸುವಂ ನೋಟ ಬೀರಿ   

ಕೊಂಚವೂ ನಾಚದೇ  ಹೃದಯ ಹೊಕ್ಕು

ನಿನ್ನ ರೂಪವನ್ನು ಕಣ್ಣ ತುಂಬ ಕಟ್ಟಿ ಹೋದ   

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?


ಕಣ್ಣ ಮುಂದೆ ನಲಿಯುತಿರುವ  

ನವಿಲು ಗರಿಯ ರೂಪದಂಥ 

ಕಪ್ಪು ಕೂದಲನ್ನು ಮೆಲ್ಲ ಸರಿಸುವಂತೆ 

ಓರೆಗಣ್ಣಿನಲ್ಲೇ ಮನಕ್ಕೆ ಮುತ್ತು ಕೊಟ್ಟು ಹೋದ    

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?


ಭಾವ ಹೃದಯ ತಟ್ಟಿ, ಒಲುಮೆ-ಚಿಲುಮೆ ಹುಟ್ಟಿ 

ಹುಟ್ಟೊ ಗುಟ್ಟು ತಿಳಿಸಿ, ಮನಸಿನಲ್ಲೇ ಕವನ ಬರೆಸಿ

ರೆಪ್ಪೆ ತುಂಬಾ ಕಾಡುವಂಥ ಕನಸ ಬೆಳೆಸಿ

ಕೇಳದೆ ಮಾಯ ಜಿಂಕೆಯಂತೆ ಹಾರಿಹೋದ

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?


ಕೆಂದಾವರೆಯಂಥ ಮುದ್ದು ಕೆನ್ನೆ ಹೊತ್ತು

ಹಿಗ್ಗಿದ ಹೂವಂಥ ನೀಳ ನಾಸಿಕ ತೊಟ್ಟು

ಸೂರ್ಯ ಕಿರಣದಂಥ ಕಣ್ಣ ನೋಟದಲ್ಲೇ

ಮನಸ ನಾಟುವಂಥ ಈಟಿ ಬಿಟ್ಟು ಹೋದ

ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?

                                                 - ಹಳ್ಳಿ ಹುಡುಗ ತರುಣ್         
                                                 - tharunkumar84@gmail.com

ನಮ್ಮ ಸಹ ಜೀತಗಾರರಾದ ದೀಪಕ್ ತಾವು bike ನಲ್ಲಿ office ಗೆ ಬರುವಾಗ ನೋಡಿದ ಒಂದು ಸುಂದರ ಹೆಣ್ಣಿನ ಬಗ್ಗೆ ಹೇಳಿ, ಬರೆಯುವಂತೆ ಪ್ರೆರೇಪಿಸಿದಾಗ ಮೂಡಿ ಬಂದ ಒಂದೆರಡು ಸಾಲುಗಳು ನಿಮ್ಮ ಮುಂದೆ..... ತಪ್ಪಿದ್ದರೆ ದಯವಿಟ್ಟು ತಿಳಿಸಿ.

ತಪ್ಪುಗಳನ್ನು ತಿದ್ದಿ-ಸಲಹೆ ಕೊಟ್ಟ ಜಲನಯನ ಅಜಾದ್ ಸರ್ ಗೆ ಧನ್ಯವಾದಗಳು....