ಮಿಂಚಿನಂತೆ ಅಂಚಿನಲ್ಲೇ ಬಂದು
ಮೂರು ಲೋಕ ತಣಿಸುವಂಥ ನೋಟ ಬೀರಿ
ಕೊಂಚವೂ ನಾಚದೇ ಹೃದಯ ಹೊಕ್ಕು
ನಿನ್ನ ರೂಪವನ್ನು ಕಣ್ಣ ತುಂಬ ಕಟ್ಟಿ ಹೋದ
ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?
ಕಣ್ಣ ಮುಂದೆ ನಲಿಯುತಿರುವ
ನವಿಲು ಗರಿಯ ರೂಪದಂಥ
ಕಪ್ಪು ಕೂದಲನ್ನು ಮೆಲ್ಲ ಸರಿಸುವಂತೆ
ಓರೆಗಣ್ಣಿನಲ್ಲೇ ಮನಕ್ಕೆ ಮುತ್ತು ಕೊಟ್ಟು ಹೋದ
ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?
ಭಾವ ಹೃದಯ ತಟ್ಟಿ, ಒಲುಮೆ-ಚಿಲುಮೆ ಹುಟ್ಟಿ
ಹುಟ್ಟೊ ಗುಟ್ಟು ತಿಳಿಸಿ, ಮನಸಿನಲ್ಲೇ ಕವನ ಬರೆಸಿ
ರೆಪ್ಪೆ ತುಂಬಾ ಕಾಡುವಂಥ ಕನಸ ಬೆಳೆಸಿ
ಕೇಳದೆ ಮಾಯ ಜಿಂಕೆಯಂತೆ ಹಾರಿಹೋದ
ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?
ಕೆಂದಾವರೆಯಂಥ ಮುದ್ದು ಕೆನ್ನೆ ಹೊತ್ತು
ಹಿಗ್ಗಿದ ಹೂವಂಥ ನೀಳ ನಾಸಿಕ ತೊಟ್ಟು
ಸೂರ್ಯ ಕಿರಣದಂಥ ಕಣ್ಣ ನೋಟದಲ್ಲೇ
ಮನಸ ನಾಟುವಂಥ ಈಟಿ ಬಿಟ್ಟು ಹೋದ
ಬೆಳ್ಳಿಯಂಥ ಬೆಡಗಿ- ಕಾಡುವಂಥ ಹುಡುಗಿ ನೀನ್ಯಾರೆ.. ?
- ಹಳ್ಳಿ ಹುಡುಗ ತರುಣ್
- tharunkumar84@gmail.com
ನಮ್ಮ ಸಹ ಜೀತಗಾರರಾದ ದೀಪಕ್ ತಾವು bike ನಲ್ಲಿ office ಗೆ ಬರುವಾಗ ನೋಡಿದ ಒಂದು ಸುಂದರ ಹೆಣ್ಣಿನ ಬಗ್ಗೆ ಹೇಳಿ, ಬರೆಯುವಂತೆ ಪ್ರೆರೇಪಿಸಿದಾಗ ಮೂಡಿ ಬಂದ ಒಂದೆರಡು ಸಾಲುಗಳು ನಿಮ್ಮ ಮುಂದೆ..... ತಪ್ಪಿದ್ದರೆ ದಯವಿಟ್ಟು ತಿಳಿಸಿ.
ತಪ್ಪುಗಳನ್ನು ತಿದ್ದಿ-ಸಲಹೆ ಕೊಟ್ಟ ಜಲನಯನ ಅಜಾದ್ ಸರ್ ಗೆ ಧನ್ಯವಾದಗಳು....
ತಪ್ಪುಗಳನ್ನು ತಿದ್ದಿ-ಸಲಹೆ ಕೊಟ್ಟ ಜಲನಯನ ಅಜಾದ್ ಸರ್ ಗೆ ಧನ್ಯವಾದಗಳು....