Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಶನಿವಾರ, ಆಗಸ್ಟ್ 28, 2010

ಎನ್ನೆಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?



ಆಗಸ್ಟ ೧೫ದು ಸ್ವಾತಂತ್ರ ದಿನದಂದು ಬರೆದಿದ್ದ ಒಂದು ಕವಿತೆ.. ಇದುವರೆಗು ಎಲ್ಲೊ publish ಮಾಡಿರಲಿಲ್ಲ, ಇಂದು ಇಲ್ಲಿ publish ಮಾಡೊಣ ಅಂತ ಮಡ್ತಾ ಇದ್ದಿನಿ.. ಎಲ್ಲರು ತಮ್ಮ ಅನಿಸಿಕೆಗಳನ್ನು ತಿಳಿಸುತ್ತಿರೆಂದು ಬಾವಿಸಿರುತ್ತೆನೆ.

ಮನಸುಗಳು ಮನಸ್ಸ ಮುರಿಯುತ್ತಿಹ
ಭಾವನೆಗಳ ಭಾವವು ಬಾಡುತ್ತಿಹ
ದುರಾಸೆಯು ಮೋಹದಿ ಬೇಳೆಯುತ್ತಿಹ
ಎನ್ನಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?

ಸಾಬರಿಮತಿಯ ಸಂದೇಶವು ಮರಯಾಗುತ್ತಿಹ
ದೇಶಭಕ್ತಿಯ ಕಲ್ಪನೆಗಳು ಕಮರುತ್ತಿಹ
ನಾನು-ನನ್ನದು ಸ್ವಾರ್ಥವು ಮೆರೆಯುತ್ತಿಹ 
ಎನ್ನಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?

ಮುಂಜಾನೆಯು ಮೌನದಿ ಮುರುಗುತ್ತಿಹ
ಮುಸ್ಸಂಜಯ ಆಟವು ಮೆಳೈಸುತ್ತಿಹ
ಪ್ರೀತಿಯು ಸ್ವಾರ್ಥದ ಕೈಯಲ್ಲಿ ನಲುಗುತ್ತಿಹ
ಎನ್ನೆಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?

ಜಾತಿ-ಧರ್ಮದ ಹೆಸರಿನಲಿ ಅಧಿಕಾರವು ನಡೆಯುತ್ತಿಹ
ಕಲ್ಪನೆಗೆ ನೀಲುಕದೆ ಕಾಂಚಾಣವು ಆಳುತ್ತಿಹ
ನರಹಂತಕರ ಹಿಂಸೆಯು ಮುಗಿಲು ಮುಟ್ಟುತ್ತಿಹ
ಎನ್ನಯ ಭಾರತಕ್ಕೆಂದಿಹುದು ಬಂಧನ ಮುಕ್ತಿಯು.. ?
-ಹಳ್ಳಿ ಹುಡುಗ ತರುಣ್

ಗುರುವಾರ, ಆಗಸ್ಟ್ 26, 2010

ಚಿಂತೆ ಏತಕೂ ನಲ್ಲನೆ........

ಚಿಂತೆ ಏತಕೂ ನಲ್ಲನೆ........

ಚಂದಿರನ ನೂಡುವಾ, ಚಿಂತೆಗೆ
ಬೀಳುವ ಅಸೆಯು ಏತಕೂ ನಲ್ಲನೆ,
ಸುಂದರ ಹುಡುಗಿಯ ಸೌಂದರ್ಯವ
ಸವಿಯಲು ಅಂಜಿಕೆ ಏತಕೂ ಗೆಳಯನೆ...?


ಕತ್ತಲೆಯ ಕರ್ಮೂಡದ ಬದುಕಿನಲ್ಲಿ ದೀಪವು
ನಾನಾಗುವೆ ಕತ್ತಲೇತಕೊ ಚಂದಿರನೆ,
ನಿನ್ನಾ ಕಲ್ಪನೆಯ ಕವಿತೆಗಳಿಗೆ ಸಂಕಲವು
ನಾನಾಗುವೆ ಕಂಪನವೇತಕೊ ಓ ಕವಿಯೆ...?

ನಿನ್ನಾ ಸಾಧನೆ ಶಿಖರಕ್ಕೆ ಮೆಟ್ಟೀಲು
ನಾನಾಗುವೆ ಸಂಸಯವೇತಕೊ ಸಾಧಕನೆ,
ಜೂಜಾಟದಲ್ಲಿ ನಿನಗೆ ಪಗಡೆಯು
ನಾನಾಗುವೆ ಭಯವೇತಕೊ ಜೂಜುಕಾರನೆ..?

ಸುಂದರ ಬದುಕಿನ ಸಂಗೀತಕ್ಕೆ ಪಲ್ಲವಿಯು
ನಾನಾಗುವೆ ಸಂಕೊಚವೇತಕೊ ಸಂಗೀತವೆ,
ಬಾಳೆಂಬ ಪಯಣದಲಿ ಸಂಗಾತಿಯು
ನಾನಾಗಿರುವೆ ಚಿಂತೆಯೇತಕೊ ನಾವಿಕನೆ..?

ಸಿಡಿಲಿನ ಹೊಡೆತಕ್ಕೆ ಉರಿಯುವ ಬದುಕಿಗೆ ಗಂಗೆಯು
ನಾನಾಗುವೆ ಕರಗುವಸೆಯೇತಕೊ ಕಲ್ಪನೆಯೆ,
ಚಂದಿರನ ನೂಡುವಾ, ಚಿಂತೆಗೆ
ಬೀಳುವ ಅಸೆಯು ಏತಕೂ ನಲ್ಲನೆ..?
-- ಹಳ್ಳಿ ಹುಡುಗ ತರುಣ್
  tharunkumar84@gmail.com


ಮಂಗಳವಾರ, ಆಗಸ್ಟ್ 24, 2010


    ನಾನೇನೆಂದು ವರ್ಣಿಸಲಿ.. ||




ಹುಣ್ಣಿಮೆಯ ಚಂದಿರನು ನಾಚುವಂತ
ನಿನ್ನ ಸುಂದರ ಮೌನವ,
ಅರಳಿದ ತಾವರೆಯು ಮುದುಡುವಂತ
ನಿನ್ನಾ ವಯ್ಯಾರದ ಸ್ಪರ್ಶವ
ನಾನೇನೆಂದು ವರ್ಣಿಸಲಿ ಓ ನಲ್ಲೆ.. ||

ಸಂಗೀತದ ಅಲೆಗಳ ಮೇಲೆ ತೇಲಿ 
ಬರುವ ಸುಪ್ರಬಾತದಂತ ನಿನ್ನಾ ಸ್ವರವ,
ಚಿಮ್ಮುವ ಜಲಪಾತದಂತೆ
ಹುಕ್ಕಿಬರುವ  ನಿನ್ನ ಮುಗುಳ್ ನಗುವ
ನಾನೇನೆಂದು ವರ್ಣಿಸಲಿ ಓ ನಲ್ಲೆ.. ||

ಕನಸಿನ ಕಲ್ಪನೆಗು ಸಿಲುಕದ
ನಿನ್ನ ಮನಸಿನ ಸೌಂದರ್ಯವ, 
ತುಂತುರು ಮಳೆಯ ಹನಿಯಂತೆ
ಮಿಣುಕುವ ನಿನ್ನ ಕಣ್ಣೀನ ರೆಪ್ಪೆಯ
ನಾನೇನೆಂದು ವರ್ಣಿಸಲಿ ಓ ನಲ್ಲೆ.. ||

ಕತ್ತಲೆಯ ಕಾರ್ಮೋಡದಲು ಚಂದಿರನಂತೆ 
ಭಾಸವಾಗುವ ನಿನ್ನ ಮೊಗವನು, 
ಸಂಪಾದ ತಂಗಾಳಿಯಲ್ಲಿ ಮುಖ 
ಮಾಡಿ ಕಣ್ಮುಚ್ಚುತಿಹ ನಿನ್ನಾನಂದವನ್ನು, 
ನಾನೇನೆಂದು ವರ್ಣಿಸಲಿ ಓ ನಲ್ಲೆ.. ||





                    - ಹಳ್ಳಿ ಹುಡುಗ ತರುಣ್
  tharunkumar84@gmail.com

ಭಾನುವಾರ, ಆಗಸ್ಟ್ 22, 2010

Hitech ಡ್ರೆಸ್ ನಲ್ಲಿ ಮೈಸೋರು ಪೇಟ ನಾ ತೊಟ್ಟಾಗ

ಸೀರೆ ಉಟ್ಟ ಹೆಣ್ಣ ನೊಡಿರಣ್ಣ



ಸೀರೆ ಉಟ್ಟ ಹೆಣ್ಣ ನೊಡಿರಣ್ಣ

ಸೀರೆ ಉಟ್ಟ ಹೆಣ್ಣ ನೊಡಿರಣ್ಣ
ನಮ್ಮೂರ ಹೆಣ್ಣು, ಬೆಂಗಳೂರ ಹೆಣ್ಣ
ಸೀರೆ ಹುಟ್ಟು ಬಂದಿಹಳಿಂದು ನೊಡಿರಣ್ಣ ||

ಪೂರ್ವಿಕರು ಕಟ್ಟು ಬೆಳೆಸಿದ ಸಂಸ್ಕೃತಿಯ
ಉಳಿಸಿ-ಬೆಳೆಸುವ ಹೆಮ್ಮೆಯಿಂದ
ಕೈ ತುಂಬ ಬಣ್ಣ-ಬಣ್ಣದ ಬಳೆಯ ತೊಟ್ಟು
ಸೀರೆ ಉಟ್ಟು ಬಂದಿಹಳಿಂದು ನಮ್ಮೂರ ಹೆಣ್ಣು ನೊಡಿರಣ್ಣ ||

ಮೂಗುತಿ ಕಾಣದ ಮುಖದ ತುಂಬ
ಮೆಳೈಸುತಿಹ ತುಟಿಗೆ ಮೆತ್ತಿಹ ಕೆಂಪು ಬಣ್ಣ
ಕವಿಗೊಂದು ನೆತಾಡುವ ಲೊಲಕ್ ಕಟ್ಟಿ
ರಂಗು-ರಂಗಿನ ರವಕೆಯ ತೊಟ್ಟು
ಮೊಹದಂತ ನಗುವ ಬೀರುತಾ
ಸೀರೆ ಉಟ್ಟು ಬರುತಿಹಳು ನಮ್ಮೂರ ಹೆಣ್ಣು ನೊಡಿರಣ್ಣ ||

ಕೈಯಲೊಂದು ಪೊನು ಹಿಡಿದು, ಕಿವಿಗೆರಡು 
ದಾರವೆಳೆದು, ಕಣ್ಣಿಗೊಂದು ಕಪ್ಪು ಕನ್ನಡಕ ತೊಟ್ಟು
ಕಾಲ್ಗೆಜ್ಜೆ ನಾದದಲ್ಲಿ ಬಳುಕುತ್ತಾ ಬರುತಿಹಳು 
ಸೀರೆ ಉಟ್ಟ ನಮ್ಮೂರ ಹೆಣ್ಣು ನೊಡಿರಣ್ಣ ||

ತೊಳಿಗೊಂದು ಚೀಲ ತೊಟ್ಟು, ಮಿಂಚುವಂತೆ 
ಹಾಗೆ ತಲೆಯ ಬಿಟ್ಟು, ಹಣೆಯ ಮೇಲೆ 
ರಂಗು-ರಂಗೊಲಿ ಬಟ್ಟು ತೊಟ್ಟು,
ಬಣ್ಣ-ಬಣ್ಣದ ಚಪ್ಪಲಿಗೆ ಒಂದುವಂತ
ಸೀರೆ ಉಟ್ಟು ಬರುತಿಹಳು ನಮ್ಮೂರ ಹೆಣ್ಣು ನೊಡಿರಣ್ಣ ||

ಸೀರೆ ಉಟ್ಟ ಹೆಣ್ಣ ನೊಡಿರಣ್ಣ
ನಮ್ಮೂರ ಹೆಣ್ಣು, ಬೆಂಗಳೂರ ಹೆಣ್ಣ
ಜರಿಯ ಸೀರೆ ಹುಟ್ಟು ಬಂದಿಹಳಿಂದು ಇಂದು ನೊಡಿರಣ್ಣ ||

- ಹಳ್ಳಿ ಹುಡುಗ ತರುಣ್
tharunkumar84@gmail.com
ph: 9986003601