ಅಂತರಾತ್ಮದಲ್ಲಿ ಅರಳಿ ಬರುವ ಗುಲಾಬಿಯೂ ನೀನಾದೆ
ಮನದೊಡಲಲ್ಲಿ ಉಕ್ಕಿಬರುವ ಜ್ವಾಲಾಮುಖಿಯೂ ನೀನಾದೆ
ಕಾಮನ ಬಿಲ್ಲಲಿ ಮೂಡಿಬರುವ ಬಣ್ಣವೂ ನೀನಾದೆ
ಪ್ರಕೃತಿಯ ಸೌಂದರ್ಯಕ್ಕೆ ರಾಣಿಯೂ ನೀನಾದೆ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!
ವರ್ಣಿಸುವ ಕವಿಯ ಕವಿತೆಗೆ ಕಲ್ಪನೆಯಾಗುವವಳೇ
ಶಿಲ್ಪಿಯ ಕೈಯಲ್ಲಿ ಆರಳುವ ಶಿಲೆಗೆ ಜೀವವಾಗುವವಳೇ
ಪ್ರಕೃತಿಯ ಜೀವಕ್ಕೆ ಮೊದಲ ಮಾತಾದವಳೇ
ಕಲಿಯುವ ಜೀವಕ್ಕೆ ಕಲಿಸುವ ಜ್ಞಾನಿಯಾಗುವವಳೇ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!
ಉಳಿವು ನೀನೇ ಅಳಿವು ನೀನೇ
ಮೊಹವು ನೀನೇ ಮೊಹಿನಿಯು ನೀನೇ
ಕದಿಯಲಾಗದ ಕನಸು ನೀನೇ ನನಸು ನೀನೇ
ಆನಂದವು ನೀನೇ ಅಸೊಯೆಯು ನೀನೇ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!
ನನ್ನೀ ಜೀವದ ಉಸಿರಿಗೆ ಜಿವದಾತೆಯಾಗಿ
ನನ್ನೊಲವಿನ ಪ್ರೀತಿಗೆ ಪ್ರೇಯಸಿಯಾಗಿ
ನನ್ನಾ ಮೋಹದ ಸಾಕ್ಷಿಗೆ ಮಗಳಾಗಿ
ಸಂಬಂದದ ಸಿಹಿಗೆ ಅಕ್ಕ-ತಂಗಿಯಾಗಿ
ನನಗೆ ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!
- ಹಳ್ಳಿ ಹುಡುಗ ತರುಣ್
tharunkumar84@gmail.com
ಓ ಹೆಣ್ಣೇ, ಬಹಳ ದಿನಗಳ ಹಿಂದೆ ಬರೆದಿದ್ದೆ, ಆದರೆ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿರಲಿಲ್ಲ,ಇಂದು ಪ್ರಕಟಿಸುವ ಮನಸಿನಿಂದ ಪ್ರಕಟಿಸುತಿದ್ದೇನೆ, ಈ ಕವಿತೆಯನ್ನು ಕೇಳಿರುವ-ಕಂಡಿರುವ ಸ್ನೇಹಿತರು ವಿನಹ ತಿಳಿಯಬಾರದೆಂದು ಕೇಳಿಕೊಳ್ಳುತೆನೇ...