ಬೆಳದಿಂಗಳ ಬೆಳಕಿನಲಿ
ಪಟ-ಪಟ ಹನಿಯ ಸದ್ದಿನಲಿ
ಮಳೆ ಬಂತು ನಮ್ಮೂರಲ್ಲಿ
ಮಲಗಿದ್ದೆ ನಾ ರಾತ್ರಿಯಲಿ..||
ಹೆಂಚಿನ ಮನೆಯ ಹಂಚಿನಲಿ
ಕಾರುತ್ತಿಹ ಹನಿ ನೀರಲ್ಲಿ,
ಕತ್ತಲೆಯ ಕೊಣೆಯಿಂದ ಬೆಳಕಿನ ಹೆಜ್ಜೆಯನ್ನಾರಸಿ
ನಾನೆದ್ದು ಹೊರ ಬಂದೆ ರಾತ್ರಿಯಲಿ..||
ಹರಿಯುವ ನೀರನ್ನು ನೋಡುತ
ಕನಸಿನ ಕಲ್ಪನೆಗಳ ಕಣ್ಣಲ್ಲೆ
ಕಟ್ಟುತ್ತಾ, ನಿಂತಿದ್ದೆ ನಾ ಬಾಗಿಲಲ್ಲೆ
ಸುರಿಯುವ ಮಳೆಯ ರಾಗದಲಿ.. ||
ಒಮ್ಮೆಲೆ ಆಕಾಶದಿಂದ ಕಣ್ಣು
ಕೊರೈಸುವ ಮಿಂಚೊಂದು ಮಿಂಚಿ
ಮಾಯವಗುತಿರೇ ಸಿಡಿಲೋಂದು ಬಡೆದು
ಬೆಚ್ಚಿದ ನಾ ಹೊಡಿ ಕೊಣೆಯ ಸೆರಿದೆ ರಾತ್ರಿಯಲಿ.. ||
ಕಣ್ಣು ಮುಚ್ಚುವ ಮೊದಲು,ಮನಸೆಲ್ಲ
ತಂಪಾಯಿತು ವರುಣನ ಆರ್ಭಟದಲಿ
ಮಳೆ ಬಂತು ನಮ್ಮೂರಲ್ಲಿ
ಮಲಗಿದ್ದೆ ನಾ ರಾತ್ರಿಯಲಿ..||
- ಹಳ್ಳಿ ಹುಡುಗ ತರುಣ್
tharunkumar84@gmail.com
4 ಕಾಮೆಂಟ್‌ಗಳು:
ವಾರೆ... ವಾಹ್ ಸೂಪರ್ ಬಾಸ್ ಮಳೆಯ ನಿಮ್ಮಿ ಕವನ ಕದ್ದೊಯ್ಯುತು ನನ್ನೆಯ ಮನಸನ್ನ ..... ಚಂದದ ಕವನ
ಒಮ್ಮೆ ಬನ್ನಿ ನನ್ನ ಸ್ನೇಹ ಲೋಕಕ್ಕೆ (ORKUT)
satishgowdagowda@gmail.com
good one...
Thanks gowdre kandita nimma sneha lokakke bartini..
thanks manasa ..
Maga super u cheers :)
ಕಾಮೆಂಟ್ ಪೋಸ್ಟ್ ಮಾಡಿ