ಬರುವೆನೇಂಬುವವನಿಗೆ ಬಾ ಎಂದು
ತನ್ನೇರಡು ಕೈ ಇಂದ ಅಪ್ಪಿ-ತಬ್ಬುವ
ಭರತ ಖಂಡದ ಪಬ್ಗಳಾ ಊರೂ
ತಾನ್ಯಾರು,ತಾನೇನು,ತಾನ್ಯಾರಿಗೆ ಎಂದು
ತಿಳಿಯದೆ ಬದುಕುವ ಜೀತದಾಳುಗಳ ನಾಡು - ಈ ಬೆಂಗಳೂರು
ಹೌದು, ಈ ಬೆಂಗಳೂರು ಬೆಳೆದಿದೆ, ಬೆಳೆಯುತಲಿದೆ, ಸಾವಿರಾರು software companyಗಳು ನಲೆಕಂಡಿರುವ ಊರು, ನನ್ನಂತ ಲಕ್ಷಾಂತರ ಮಂದಿಗೆ ಕೆಲಸ ಕೊಟ್ಟು ಬದುಕುಕಟ್ಟಿಕೊಳ್ಳಲು ದಾರಿ ತೊರಿರುವ ಊರು, ಇಲ್ಲೇ ಆ ಜೀತ ಪದ್ದತಿ ಇರುವುದು. ಇದು ಅಂತಿಂತ ಜೀತವಲ್ಲ "Hi-tech-ಜೀತ". ಆ ಜೀತದಾಳುಗಳು ಬೇರೆಯಾರು ಅಲ್ಲ ನನ್ನಂತ ಲಕ್ಷಾಂತರ software engg. ಗಳೆ, ಹೌದು ನಾವೇ ಜೀತಾದಳುಗಳು, Hi-tech ಜೀತಾದಳುಗಳು.
ಅಂದು ನನ್ನಜ್ಜಾ-ಮುತ್ತಜ್ಜಾರು ಯಾರೊ ಒಬ್ಬ ಜಮ್ಮಿಂದಾರನ, ದುಡ್ಡಿನಾ ಹೊಡೆಯನ ಮನೆಯಲ್ಲಿ ಅವನು ನೀಡುವ ಹಿಂಸೆ, ಕಷ್ಟಗಳನ್ನು ಸಹಿಸಿಕೊಂಡು, ಎದುರು ಮಾತನ್ನಾಡುವ ಧ್ವನಿಯಿಲ್ಲದೆ, ತುಂಡು ಪುಟುಗೋಸಿ ತೊಟ್ಟು ಜೀವನ ಸಾಗಿಸುತಿದ್ದರಂತ್ತೆ. ಆದರೆ ಇಂದು ನಾವು ವಿದ್ಯಾವಂತರು, ಬುದ್ದಿವಂತರು ಮಾಡುತ್ತಿರುವುದಾದರು ಎನೂ..
ಅದೇ ಜೀತ ತಾನೇ..... ತಿಂಗಳ ಸಂಬಳಕ್ಕೆ ನಮ್ಮನ್ನು ನಾವೇ ಮಾರಿಕೊಂಡು, ಕಣ್ಣಿಗೆ ಕಾಣದ ಪರಕೀಯಾನೊಬ್ಬನು ಹೇಳುವ ಕೆಲಸವನ್ನು, ಮರು-ಮಾತಾಡದೆ, ಮಾನಸಿಕ ತೊಳಲಾಟದಲಿ, ಮನೆ-ಮಂದಿಯನ್ನು ಮರೆತು ಅವನೇಳಿದ ಸಮಯಕ್ಕೆ ಮಾಡಿ ಮುಗಿಸಿವವರು ನಾವಲ್ಲವೇ.. ಅವನ ಸಂತೊಷದ ಮಾತುಗಳಲ್ಲೆ ಕುಷಿಪಡುವ ಜೀವಗಳು ನಾವಲ್ಲವೇ... ಇದು ಜೀತವಲ್ಲದೆ ಬೆರೇನು. ಇದು HiTech ಜೀತವಲ್ಲವೇ.................
ತುತ್ತು ಅನ್ನಕ್ಕೆ, ತುಂಡು ಬಟ್ಟೆಗೆ, ಮತ್ತೀ ತುಂಡು ಬದುಕಿಗೆ
ಗಂಟೆಗೊಮ್ಮೆ ನಡೆಯುವ ಮೀಟಿಂಗ್‌ಗಳು
ನಿಮಿಷಕ್ಕೊಮ್ಮೆ ಬರುವ ಇ-ಮೆಲ್ಗಳು
ಸಮಯದ ಅರಿವಿಲ್ಲದೇ ಟ್ರಣ್ ಎನ್ನುವ ಫೋನುಗಳು
ಯಾರಿಗೆ ಎತಕೆ ಮಾಡುತಿರುವೆಯೆಂದರಿಯದ ಕೆಲಸವಿದು
ಅವ್ವ ಜೀತ ಮಾಡಲಾರೆ ನಾ....
ರಾತ್ರಿ ನಿದ್ದೆ ಮಾಡಲು ಕೆಲಸದ ಕನಸು
ಬೆಳಗೆ ಎದ್ದು ಹಲ್ಲುಜ್ಜುವ ಮೊದಲು ಕೆಲಸದ ನೆನಪು
ತಿಂಗಳಾಯಿತು ರವಿಯ ಕಂಡು
ರಾತ್ರಿ-ಹಗಲು ಎಂದಾಗಿಹೋಯಿತೋ ತಿಳಿಯದು
ಅವ್ವ ಜೀತ ಮಾಡಲಾರೆ ನಾ....
ಈಗೀಗ ಜೀತದ ಗತಿ-ಸ್ಥಿತಿ ಬದಲಾಗಿದೆ
ಅಂದು ಜೀತದಾಳು ತೊಡುತಿದ್ದರು ತುಂಡು ಬಟ್ಟೆ
ಇಂದು ನಾ ತೊಡುವೆ ನೀಟಾಗಿರುವ ಅಂಗಿ ಅದಕ್ಕೊಂದು ಟೈ
ಅಂದು ದೇಹದ ದುರ್ನಾತ, ಮನಗಳ ಸುವಾಸನೆ...
ಇಂದು ದೇಹದ ಸುವಾಸನೆ , ಮನಗಳ ದುರ್ನಾತ..
ಕೃತಕ ನಗು,ಕೃತಕ ಮರ್ಯದೆ, ಎಲ್ಲವೂ ಕೃತಕವಿಲ್ಲಿ
ಅವ್ವ ಜೀತ ಮಾಡಲಾರೆ ನಾ....
ತುತ್ತು ಅನ್ನಕ್ಕೆ, ತುಂಡು ಬಟ್ಟೆಗೆ, ಮತ್ತೀ ಈ ತುಂಡು ಬದುಕಿಗೆ
- ಇಂತಿ ನಿಮ್ಮ ಹಳ್ಳಿ ಹುಡುಗ ತರುಣ್
Note : ಈ Blog ನಲ್ಲಿ ಎನಾದರು ತಪ್ಪುಗಳಿದ್ದರೆ ದಯವಿಟ್ಟು ಕ್ಷೆಮಿಸಿ ಮತ್ತು ನನಗೆ ತಿಳಿಸಿ.. ನಿಮ್ಮ ಅನಿಸಿಕೆಗಳನ್ನು ತಪ್ಪದೆ comment ನಲ್ಲಿ ತಿಳಿಸಿ
1 ಕಾಮೆಂಟ್:
ತರುಣ HiTech ಜೀತದ ಬಗ್ಗೆ ನಿನ್ನ ಬರವಣಿಗೆ ಮತ್ತು ಕವನ ಚನ್ನಾಗಿದೆ !
ಕಾಮೆಂಟ್ ಪೋಸ್ಟ್ ಮಾಡಿ