ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ
ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮಸಮುದ್ಭವಮ್
ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರ ಸಮುದ್ಭವಮ್
ತಸ್ಮಾತ್ ಸರ್ವಗತಂ ಬ್ರಹ್ಮ ನಿತ್ಯಂ ಯಜ್ಞೇ ಪ್ರತಿಷ್ಠಿತಮ್. (ಮೂಲ ಭಗವದ್ಗೀತೆ ೩=೧೪-೧೫)
ಯಜ್ಞವೇ ಸೃಷ್ಠಿನಿಯತಿರೂಪದ ಋತಕ್ಕೂ ಮೂಲ. ಮಾನವ ತನ್ನದೆಂದು ಹೇಳಿಕೊಳ್ಳುವ ವಸ್ತು ಪ್ರಪಂಚದಲ್ಲಿ ಯಾವುದೂ ಇಲ್ಲ. ಅವನು ಸ್ವಾರ್ಥಕ್ಕಾಗಿ ಸಂಪಾದಿಸಿದ ಹಣ ಮೊದಲುಗೊಂಡು ಮುಕ್ತಿಗಾಗಿ ಮಾಡುವ ತಪಸ್ಸಿನ ತನಕ ಎಲ್ಲಕ್ಕೂ ಯಜ್ಞವೆ ಮೂಲ;
ಕೊನೆಗೆ ಎಲ್ಲವೂ ಅದರಲ್ಲಿಯೆ ಲಯಹೊಂದಬೇಕು. ಒಟ್ಟಿನಲ್ಲಿ ಮಾನವನ ಸರ್ವಸಿದ್ಧಿ ಆ ಯಜ್ಞದಿಂದಲೆ ಲಭಿಸಬೇಕು.
ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋವಾಚ ಪ್ರಜಾಪತಿಃ
ಅನೇನ ಪ್ರಸವಿಶ್ಯಧ್ವಮೇಷವೋsಸ್ತ್ವಿಷ್ಪಕಾಮಧುಕ್ (ಮೂಲ ಭಗವದ್ಗೀತೆ ೩-೧೦)
ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಯಜ್ಞದಿಂದ ಬಂದುದನ್ನು ಮತ್ತೆ ಯಜ್ಞರೂಪದಿಂದ ನಿವೇದಿಸದಿದ್ದರೆ ಮಾನವ ವಂಚಕನಾಗುತ್ತಾನೆ.
ಇಷ್ಟಾನ್ ಭೋಗಾನ್ ಹಿ ವೋ ದೇವಾ ದಾಸ್ಯಂತೇ ಯಜ್ಞಭಾವಿತಾಃ
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಎವ ಸಃ (ಮೂಲ ಭಗವದ್ಗೀತೆ ೩-೧೨)
ಅವನಿಗೆ ತನ್ನ ಸಾಧನೆಯ ಪರಮಪ್ರಯೋಜನ ಸಿದ್ದಿಸುವುದಿಲ್ಲ. ಒಟ್ಟಿನಲ್ಲಿ ನಿಷ್ಕಾಮವಾದ ಸ್ವಾರ್ಪಣವೆ ಯಜ್ಞವೆಂದು ಹೇಳಬಹುದು.
"ಭಗವದರ್ಪಿತಮಾಗೆ , ಸಾವುದುಂ ಬರ್ದುಕುವೋಲ್ ಶ್ರೇಯಸ್ಕರಂ."
-ಮೂಲ ಕುವೆಂಪುರವರ ಬೆರಳ್ ಗೆ ಕೊರಳ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ