Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಶನಿವಾರ, ಅಕ್ಟೋಬರ್ 23, 2010

ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........




   ನಿನ್ನ ಕಣ್ಣಲ್ಲಿ ಕವಿದಿಹ ಪೊರೆಯ
ನಡುವಲ್ಲಿ ಮೂಡಿಹ ಅಹಂ,
   ದ್ವೇಷದ ಭಾವಾದಿ, ಕನಸಿನ ಮೊಹದಿ
    ವಿಷವ ಕಾರುತಿಹ ನಿನ್ನ ಮನಸಿನ ಆಸೆ
               ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........!

ತಾ ಬೆಳೆದರೆ ಎಲ್ಲ,
 ತಾನುಳಿದರೆ ಚೆನ್ನ, ತನಗೆತನೆಲ್ಲಾ 
ತಾನಗಿನ್ಯಾರು ಎನ್ನುತಿಹ       
ನಿನ್ನ ಮನಸಿನ ದುರಹಂಕಾರ
           ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ........!

ಪರರಿಗಪಕಾರವ ಬಯಸಿ
ತನ್ನುಪಕರಕ್ಕೆಂದು ಸ್ವಾರ್ಥದ 
ಅಲೆಗಳಲ್ಲಿ ತೇಲಿ ಆನಂದಿಸುತ 
ನೀ ನುಡಿಯುತ್ತಿರುವ ಸತ್ಯ
              ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ...........!

ಮದವೇರಿದ ಹುಮ್ಮಸಿನಲ್ಲಿ
ಅಧಿಕಾರದ ಗದ್ದುಗೆಯಲಿ
ಕಷ್ಠವೆಂದು ಬಂದವರ ಲೆಕ್ಕಿಸದೆ
ತನ್ನವರಿಗೆಂದು ಕೂಡಿಟ್ಟ ಹಣ
             ಅದು ಬೆಳಕಲ್ಲೋ ಅಣ್ಣ ಅದು ಬೆಳಕಲ್ಲ.........!


                                                                    - ಹಳ್ಳಿ ಹುಡುಗ ತರುಣ್
                                                          tharunkumar84@gmail.com  

    

8 ಕಾಮೆಂಟ್‌ಗಳು:

shivu.k ಹೇಳಿದರು...

ತರುಣ್,

ದ್ವೇಷ, ದುರಹಂಕಾರ, ಮದ, ಸ್ವಾರ್ಥಗಳ ಬಗ್ಗೆ ಸೊಗಸಾದ ತಿಳಿವಳಿಕೆಯ ಕವನ ಬರೆದಿದ್ದೀರಿ ಚೆನ್ನಾಗಿದೆ.

Manju M Doddamani ಹೇಳಿದರು...

ಚನ್ನಾಗಿದೆ ಮಗ

ಅಪ್ಪ-ಅಮ್ಮ(Appa-Amma) ಹೇಳಿದರು...

ತರುಣ್,
ಮದ-ಮತ್ಸರ-ದ್ವೇಷವೆಂಬ ದಳ್ಳುರಿಗಳ ಚಿತ್ರಣ ಗಾಢವಾಗಿದೆ.

Shashi jois ಹೇಳಿದರು...

ತರುಣ್ ಮನುಷ್ಯನ ಸ್ವಭಾವದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ .
ಮದ,ಮತ್ಸರ,ಅಹಂಕಾರದ ವನ್ನು ಮೆಟ್ಟಿ ನಿಂತರೆ ಒಳ್ಳೆ ವ್ಯಕ್ತಿ ಅನಿಸಿ ಕೊಳ್ಳಬಹುದಲ್ವಾ?

ಹಳ್ಳಿ ಹುಡುಗ ತರುಣ್ ಹೇಳಿದರು...

thanks shivu sir

ಹಳ್ಳಿ ಹುಡುಗ ತರುಣ್ ಹೇಳಿದರು...

thanks maga manju

ಹಳ್ಳಿ ಹುಡುಗ ತರುಣ್ ಹೇಳಿದರು...

thanks appa-amma ravare nimma comments ge.. how is sanvi doin ?

ಹಳ್ಳಿ ಹುಡುಗ ತರುಣ್ ಹೇಳಿದರು...

thanks shashi,

howdu shashi ravari manusya tanna mada moha matsaravannu mettu nintare manusyanagabahudu adre adanna maduvavru yeru illa nan ante heluvare ella... :)