Hitech ಜೀತ

Associate ಆಗಿ ಸೇರಿ, ಗೂಗಲ್ ಗಿಗಲ್ ಮಾಡಿಕೊಂಡು,ಹಗಲು ರಾತ್ರಿ ಕೋಡಿಂಗ್ ಮಾಡು ಲೈಫು ಇಷ್ಟೇನೆ...

"Hitech ಜೀತ"ಕ್ಕೆ ನಿಮಗೆ ಸ್ವಾಗತ....


"Hitech ಜೀತ"ಕ್ಕೆ ನಿಮಗೆ ಸ್ವಾಗತ....

ಭಾನುವಾರ, ಅಕ್ಟೋಬರ್ 24, 2010

ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ ..............



ನಾನು ಇಷ್ಟ ಪಡುವ
ನನ್ನ ಪ್ರೀತಿಗೆ ಅರ್ಥಕೊಡುವ 
ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ
ನನಗೆ ಇನ್ನು ಸಿಕ್ಕಿಲ್ಲ...!!

ಬರುವ ಸಂಬಳ ನನ್ನ ಜೊಬು
ತುಂಬಲ್ಲ, ನನ್ನ ಬಳಿಯು ಸಾಲದ 
ಕರೆಯೋಲೆಯ ಪತ್ರವಿಲ್ಲ
ಅದು ಅವಳಿಗೆ ಹಿಡಿಸೋಲ್ಲ ....೧

ಮಾಲು-ಗಿಲು ಸುತ್ತೋ ಚಟವು
ನನಗಿಲ್ಲ, ಕಾರು-ಬೈಕು 
ನನ್ನ ಬಳಿ ಮೊದಲೇ ಇಲ್ಲ
ಅದು ಅವಳಿಗೆ ಹಿಡಿಸೋಲ್ಲ ....೨

ಹಿಂದಿ-ಇಂಗ್ಲೀಶ್ ಮತಾಡೋಕ್ಕೆ 
ನನಗೆ ಬರಲ್ಲ, ಪೀಜಾ-ಬರ್ಗರ್ 
ನಾನು ತಿನ್ನಲ್ಲ
ಅದು ಅವಳಿಗೆ ಹಿಡಿಸೋಲ್ಲ....೩

ನಾ ಹಾಕೋ ಬಟ್ಟೆಗೆ ಬಣ್ಣ ಬಳೆದಿಲ್ಲ, 
ಅಂದವ ತಿಳಿಯದ ಕೃತಕ 
ಬದುಕಿನ ಪೇಟೆಯ ಹುಡುಗ ನಾನಲ್ಲ
ಅದು ಅವಳಿಗೆ ಹಿಡಿಸೋಲ್ಲ....೪

ನಾ ಇಷ್ಟ ಪಡುವ
ನನ್ನ ಪ್ರೀತಿಗೆ ಅರ್ಥಕೊಡುವ 
ಕಷ್ಟದ ಹುಡುಗಿ ಇನ್ನು ಸಿಕ್ಕಿಲ್ಲ
ನನಗೆ ಇನ್ನು ಸಿಕ್ಕಿಲ್ಲ...!!

                                          - ಹಳ್ಳಿ ಹುಡುಗ ತರುಣ್
                                                          tharunkumar84@gmail.com  


11 ಕಾಮೆಂಟ್‌ಗಳು:

ಚಿನ್ಮಯ ಭಟ್ ಹೇಳಿದರು...

ಬರಲಿ ನಾಳೆ
ಒಬ್ಬಳು ನಿಮ್ಮ ಮೆಚ್ಚಿ.
ನಿಮಗಿಂತ ಜಾಸ್ತಿ,
ನಿಮ್ಮತನವ ಮೆಚ್ಚಿ

SATISH N GOWDA ಹೇಳಿದರು...

ತಾಳ್ಮೆ ಇರಲಿ ತರುಣ್ ಈ ಪ್ರಪಂಚದಲ್ಲಿ ಸಿಗದೇ ಇರುವದು ಏನೂ ಇಲ್ಲ .... ಹಾಗೇ ನಿನಗೂ ನಿನ್ನ ಮೆಚ್ಚಿ , ನಿನ್ನ ಜೊತೆ ಸಾಗುವಂತ ಹುಡುಗಿ ಸಿಕ್ಕೆ ಸಿಗುತ್ತಾಳೆ... ಕಾದು ನೋಡಿ ...

ಹಳ್ಳಿ ಹುಡುಗ ತರುಣ್ ಹೇಳಿದರು...

hmmm chnmaya thanks for ur comments.

ಹಳ್ಳಿ ಹುಡುಗ ತರುಣ್ ಹೇಳಿದರು...

sathish y=thanks for ur coments...

tappu tilibedi.. idu nagalla hage genaral ahaagi berediddu.. :)

ದೀಪಸ್ಮಿತಾ ಹೇಳಿದರು...

ಸಿಗ್ತಾಳೆ ಬಿಡಿ ಸಾರ್. ಮನಮೆಚ್ಚುವ ಹುಡುಗಿ ಸಿಕ್ಕೇ ಸಿಗ್ತಾಳೆ

ಅಪ್ಪ-ಅಮ್ಮ(Appa-Amma) ಹೇಳಿದರು...

ತರುಣ್,

ಮಾಲು-ಗೀಲು ಸುತ್ತೋ ಚೆಟವಿಲ್ಲಾ ಅನ್ನೋದು ಒಳ್ಳೇದು..
ಮುಂದೆ ಆ ತರ ಹುಡುಗಿಯೇನಾದರೂ ಸಿಕ್ಕರೆ ಮೊದಲೇ ಪ್ರೀ ಕಂಡೀಶನ್ ಇರೋದರಿಂದ, ಆನಾಯಸವಾಗಿ ಮಾಲನಲ್ಲಿ ಕಳೆದುಹೋಗುವುದು ತಪ್ಪುತ್ತೆ :)

Manju M Doddamani ಹೇಳಿದರು...

ಬಿಡು ಮಗ ಸಿಕ್ತಾಳೆ ನಿನಗಂತನೆ ಆ ದೇವರು ವಿಶೇಷವಾಗಿ ಭೂಮಿಗೆ ಆ ಹುಡುಗಿನ ಕಳಿಸಿದಾನೆ ಹೆದ್ರುಕೊಬೇಡ :) :)

ಹಳ್ಳಿ ಹುಡುಗ ತರುಣ್ ಹೇಳಿದರು...

deepa smitha thanks for ur comments... adu nijane ri.. urige bandirolu niri ge barodilva avagaladru siktale antira... :)

ಹಳ್ಳಿ ಹುಡುಗ ತರುಣ್ ಹೇಳಿದರು...

saanvi - appa-amma ravari thanks nimma anubhavada maatige... :)

ಹಳ್ಳಿ ಹುಡುಗ ತರುಣ್ ಹೇಳಿದರು...

thanks vasant :)

ಹಳ್ಳಿ ಹುಡುಗ ತರುಣ್ ಹೇಳಿದರು...

thnaks manju.. :)