ಬೆತ್ತಲೆ ಮನಸಿನ ಕನಸಿನಲಿ
ಕತ್ತಲೆ-ಬೆಳಕಿನ ಆಟದಲಿ
ಸ್ವಾರ್ಥವು ತುಂಬಿದ ಬದುಕಿನಲಿ
ಕುಂಟುತ್ತಾ ಸಾಗುವ ಹಾದಿಯಲಿ
ಒಂಟಿ ಪಯಣಿಗ ನಾನಿಲ್ಲಿ.... !
ಕೋಪ-ತಾಪದ ಮಳೆಯಲಿ
ಜಾತಿ-ಧರ್ಮದ ಗಿಡ-ಮರಗಳ ನೆರಳಿನಲಿ
ಕಷ್ಟ-ಸುಖದ ಚಿಲಿ-ಪಿಲಿ ಇಂಚರದಲಿ
ಕುಂಟುತ್ತಾ ಸಾಗುವ ಹಾದಿಯಲಿ
ಒಂಟಿ ಪಯಣಿಗ ನಾನಿಲ್ಲಿ.... !
ಅಸೊಯೆಯು ತುಂಬಿದ ಕಲ್ಲು-ಮಣ್ಣಿನ ದಾರಿಯಲಿ
ಮೋಹದ ಪೊರೆಯಲಿ ಮುಚ್ಚಿದ ನೋಟದಲಿ
ದ್ವೇಷದಿ ಉರಿಯುತ್ತಿರುವ ಬಂಡೆಗಳ ನಡುವಲ್ಲಿ
ಕುಂಟುತ್ತಾ ಸಾಗುವ ಹಾದಿಯಲಿ
ಒಂಟಿ ಪಯಣಿಗ ನಾನಿಲ್ಲಿ.... !
ಅರ್ಥವ ತಿಳಿಯದ ಆಸೆಯು ತುಂಬಿದ ಹೆಜ್ಜೆಗಳಲ್ಲಿ
ದಗೆ ಏರಿದ ಬಯಕೆಗಳ ಬಾಯಾರಿಕೆಯಲ್ಲಿ
ಅಂತ್ಯವ ಕಾಣದೆ ಉರುಳುತ್ತಿರುವ ಗಡಿಗಳಲ್ಲಿ
ಕುಂಟುತ್ತಾ ಸಾಗುವ ಹಾದಿಯಲಿ
ಒಂಟಿ ಪಯಣಿಗ ನಾನಿಲ್ಲಿ.... !
ವರುಷ ವರುಷಕ್ಕೂ ಬರುವ ಈ ಹೊಸ ವರುಷ ನಿಮ್ಮೆಲ್ಲರ ಬಾಳಿನಲ್ಲಿ ಸದಾ ಹರುಷದ ಹೊನಲನ್ನು ಹೊತ್ತಿ ತರಲಿ, ಶಾಂತಿ, ಸಹನೆ, ಸಹಬಾಳ್ವೆಯು ಎಲ್ಲರ ನೆಲೆಯಾಗಲಿ... ಹೊಸ ವರುಷದ ಹಾರ್ದಿಕ ಶುಭಾಶಯಗಳು ...
- ಹಳ್ಳಿ ಹುಡುಗ ತರುಣ್
- tharunkumar84@gmail.com
11 ಕಾಮೆಂಟ್‌ಗಳು:
:) Chennagi ide
ಕುಂಟುತ್ತಾ ಸಾಗುವುದೇತಕೆ
ಜೀವನವಿದು ಸವಿಗಾನ....
ನಲಿಯುತ್ತಾ ಸಾಗಲಿ
ನಮಗಿರಲಿ ವ್ಯವದಾನ....
ಹೊಸವರ್ಷದ ಹಾರ್ದಿಕ ಶುಭಾಶಯಗಳು....
nimagu hosa varshada shubhashaya..
nanna blogigomme banni
sunil praveen sir, vanishri madam nimma anisikegalige dhanyavaadagalu...
ತರುಣ್, ತುಂಬಾ ಸುಂದರವಾದ ಸಾಲುಗಳು..
ಹೊಸ ವರುಷದ ಶುಭಾಶಯಗಳು..
ತರಣು ಜೊತೆಗೆ ನಾವಿದ್ದೇವೆ. ಹೆದರಬೇಡಿ ಓಂಟಿ ಪಯಣಿಗರು ನೀವಲ್ಲ! ಕವನ ಚೆನ್ನಾಗಿದೆ.
ತರುಣ್,
ತಡವಾದ ಹೊಸ ವರ್ಷದ ಶುಭಾಶಯಗಳು !
ಚೆಂದದ ಕವನ ಮತ್ತು ಆಶಯ.
anil nimmagu shuvashayagalu. thanks
thanks sathish...
nivu jote irovaga navu onti agolla bidi..
danyavadagalu saanviya appa amma ge..
danyavadagalu saanviya appa amma ge..
ಕಾಮೆಂಟ್ ಪೋಸ್ಟ್ ಮಾಡಿ