ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ |
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಹಲವು ಬಣ್ಣದ ದೇಹದ ತುಂಬ
ಬಣ್ಣ ಬಣ್ಣದ ಬಟ್ಟನು ತೊಟ್ಟ ಚಿಟ್ಟೆ....||
ಹೂವಿಂದ ಹೂವಿಗೆ ಪಯಣಿಸುವ ಚಿಟ್ಟೆ
ನೋಡುವ ಕಣ್ಣಿಗೆ ನೀ ಕನಸಾಗಿ ಬಿಟ್ಟೆ....
ನಲಿ ನಲಿದಾಡುತ ಸವಿಯನು ಸವಿಯುವ ಚಿಟ್ಟೆ
ಬರೆಯುವ ಕೈಗಳಿಗೆ ನೀ ಕವಿತೆಯಾಗಿ ಬಿಟ್ಟೆ...
ತಳಿರು-ತೋರಣದಲ್ಲಿ ಹೊಮ್ಮಿಸುವ ಓಂಕಾರದ ಚಿಟ್ಟೆ
ಕೇಳುವ ಕಿವಿಗಳಿಗೆ ಸಂಗೀತದ ಅಲೆಯಾಗಿ ಬಿಟ್ಟೆ...
ಕ್ಷಣ-ಕ್ಷಣವು ಕಣ್ಮುಂದೆ ಮಾಯವಾಗುವ ಚಿಟ್ಟೆ
ಹುಡುಕುವ ಮನಸಿಗೆ ನೀ ಆಟವಾಗಿ ಬಿಟ್ಟೆ...
ನಿನ್ನನು ಹಿಡಿಯಲು ನಾ ಆಸೆ ಪಟ್ಟೇ
ನೀನು ನನ್ನ ಮನಸ್ಸನ್ನೇ ಕದ್ದು ಬಿಟ್ಟೆ
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ.......||
- ಹಳ್ಳಿ ಹುಡುಗ ತರುಣ್
- tharunkumar84@gmail.com
5 ಕಾಮೆಂಟ್ಗಳು:
ಚಿಟ್ಟೆಯನ್ನು ಕಣ್ಮುಂದೆ ತರುವ ಸುಂದರ ಕವನ.
ಚಿಟ್ಟೆಯ ಹಿಂದೆ ಅದನ್ನು ಹಿಡಿಯುವ ಪುಟ್ಟ ಹುಡುಗನ್ನ ಹಿಂಬಾಲಿಸಿದಂತಿದೆ ತರುಣ್ ನಿನ್ನ ಕವಿತೆ...!! ಬಾಲ್ಯದ ನೆನಪುಗಳನ್ನು ಹೊತ್ತು ಚಿಟ್ಟೆಯಹಿಂದಿನ ಪಯಣ..ಇಷ್ಟವಾಯ್ತು...
ಚಿಟ್ಟೆ-ಬಿಟ್ಟೆ-ಪಟ್ಟೆ....
ಪ್ರಾಸಪದಗಳ ಬಳಕೆ ಚೆನ್ನಾಗಿದೆ....
ಸಣ್ಣವರಿರೋವಾಗ ಹಾಡುತ್ತಿದ ಹಾಡುಗಳು ಹಾಗೆ ಮನಕ್ಕೆ ಬಂದು ಹೋಗುತ್ತದೆ....
prosahada ellarigu dhanyavadagalu...
ಭಾವದ ಜೊತೆಗೆ, ಕವನಕ್ಕೆ ಒಂದು ಆಕಾರ ಕೊಟ್ಟಿದ್ದೀರ. ತುಂಬಾ ಚೆನ್ನಾಗಿದೆ...
ಕಾಮೆಂಟ್ ಪೋಸ್ಟ್ ಮಾಡಿ