ಸೀರೆ ಉಟ್ಟ ಹೆಣ್ಣ ನೊಡಿರಣ್ಣ
ಸೀರೆ ಉಟ್ಟ ಹೆಣ್ಣ ನೊಡಿರಣ್ಣ
ನಮ್ಮೂರ ಹೆಣ್ಣು, ಬೆಂಗಳೂರ ಹೆಣ್ಣ
ಸೀರೆ ಹುಟ್ಟು ಬಂದಿಹಳಿಂದು ನೊಡಿರಣ್ಣ ||
ಪೂರ್ವಿಕರು ಕಟ್ಟು ಬೆಳೆಸಿದ ಸಂಸ್ಕೃತಿಯ
ಉಳಿಸಿ-ಬೆಳೆಸುವ ಹೆಮ್ಮೆಯಿಂದ
ಕೈ ತುಂಬ ಬಣ್ಣ-ಬಣ್ಣದ ಬಳೆಯ ತೊಟ್ಟು
ಸೀರೆ ಉಟ್ಟು ಬಂದಿಹಳಿಂದು ನಮ್ಮೂರ ಹೆಣ್ಣು ನೊಡಿರಣ್ಣ ||
ಮೂಗುತಿ ಕಾಣದ ಮುಖದ ತುಂಬ
ಮೆಳೈಸುತಿಹ ತುಟಿಗೆ ಮೆತ್ತಿಹ ಕೆಂಪು ಬಣ್ಣ
ಕವಿಗೊಂದು ನೆತಾಡುವ ಲೊಲಕ್ ಕಟ್ಟಿ
ರಂಗು-ರಂಗಿನ ರವಕೆಯ ತೊಟ್ಟು
ಮೊಹದಂತ ನಗುವ ಬೀರುತಾ
ಸೀರೆ ಉಟ್ಟು ಬರುತಿಹಳು ನಮ್ಮೂರ ಹೆಣ್ಣು ನೊಡಿರಣ್ಣ ||
ಕೈಯಲೊಂದು ಪೊನು ಹಿಡಿದು, ಕಿವಿಗೆರಡು
ದಾರವೆಳೆದು, ಕಣ್ಣಿಗೊಂದು ಕಪ್ಪು ಕನ್ನಡಕ ತೊಟ್ಟು
ಕಾಲ್ಗೆಜ್ಜೆ ನಾದದಲ್ಲಿ ಬಳುಕುತ್ತಾ ಬರುತಿಹಳು
ಸೀರೆ ಉಟ್ಟ ನಮ್ಮೂರ ಹೆಣ್ಣು ನೊಡಿರಣ್ಣ ||
ತೊಳಿಗೊಂದು ಚೀಲ ತೊಟ್ಟು, ಮಿಂಚುವಂತೆ
ಹಾಗೆ ತಲೆಯ ಬಿಟ್ಟು, ಹಣೆಯ ಮೇಲೆ
ರಂಗು-ರಂಗೊಲಿ ಬಟ್ಟು ತೊಟ್ಟು,
ಬಣ್ಣ-ಬಣ್ಣದ ಚಪ್ಪಲಿಗೆ ಒಂದುವಂತ
ಸೀರೆ ಉಟ್ಟು ಬರುತಿಹಳು ನಮ್ಮೂರ ಹೆಣ್ಣು ನೊಡಿರಣ್ಣ ||
ಸೀರೆ ಉಟ್ಟ ಹೆಣ್ಣ ನೊಡಿರಣ್ಣ
ನಮ್ಮೂರ ಹೆಣ್ಣು, ಬೆಂಗಳೂರ ಹೆಣ್ಣ
ಜರಿಯ ಸೀರೆ ಹುಟ್ಟು ಬಂದಿಹಳಿಂದು ಇಂದು ನೊಡಿರಣ್ಣ ||
- ಹಳ್ಳಿ ಹುಡುಗ ತರುಣ್
tharunkumar84@gmail.com
ph: 9986003601
1 ಕಾಮೆಂಟ್:
kavite ishta aaytu . nimage thanks.
ಕಾಮೆಂಟ್ ಪೋಸ್ಟ್ ಮಾಡಿ