ಅಂತರಾತ್ಮದಲ್ಲಿ ಅರಳಿ ಬರುವ ಗುಲಾಬಿಯೂ ನೀನಾದೆ
ಮನದೊಡಲಲ್ಲಿ ಉಕ್ಕಿಬರುವ ಜ್ವಾಲಾಮುಖಿಯೂ ನೀನಾದೆ
ಕಾಮನ ಬಿಲ್ಲಲಿ ಮೂಡಿಬರುವ ಬಣ್ಣವೂ ನೀನಾದೆ
ಪ್ರಕೃತಿಯ ಸೌಂದರ್ಯಕ್ಕೆ ರಾಣಿಯೂ ನೀನಾದೆ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!
ವರ್ಣಿಸುವ ಕವಿಯ ಕವಿತೆಗೆ ಕಲ್ಪನೆಯಾಗುವವಳೇ
ಶಿಲ್ಪಿಯ ಕೈಯಲ್ಲಿ ಆರಳುವ ಶಿಲೆಗೆ ಜೀವವಾಗುವವಳೇ
ಪ್ರಕೃತಿಯ ಜೀವಕ್ಕೆ ಮೊದಲ ಮಾತಾದವಳೇ
ಕಲಿಯುವ ಜೀವಕ್ಕೆ ಕಲಿಸುವ ಜ್ಞಾನಿಯಾಗುವವಳೇ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!
ಉಳಿವು ನೀನೇ ಅಳಿವು ನೀನೇ
ಮೊಹವು ನೀನೇ ಮೊಹಿನಿಯು ನೀನೇ
ಕದಿಯಲಾಗದ ಕನಸು ನೀನೇ ನನಸು ನೀನೇ
ಆನಂದವು ನೀನೇ ಅಸೊಯೆಯು ನೀನೇ
ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!
ನನ್ನೀ ಜೀವದ ಉಸಿರಿಗೆ ಜಿವದಾತೆಯಾಗಿ
ನನ್ನೊಲವಿನ ಪ್ರೀತಿಗೆ ಪ್ರೇಯಸಿಯಾಗಿ
ನನ್ನಾ ಮೋಹದ ಸಾಕ್ಷಿಗೆ ಮಗಳಾಗಿ
ಸಂಬಂದದ ಸಿಹಿಗೆ ಅಕ್ಕ-ತಂಗಿಯಾಗಿ
ನನಗೆ ನೀನಿನ್ನೇನಾಗಲಿಲ್ಲ ನೀನೇ ಹೇಳೆ,
ನಿನಗೆ ಸಾಟಿಯಾರು ನೀನೇ ಹೇಳೆ - ಓ ಹೆಣ್ಣೇ!
- ಹಳ್ಳಿ ಹುಡುಗ ತರುಣ್
tharunkumar84@gmail.com
ಓ ಹೆಣ್ಣೇ, ಬಹಳ ದಿನಗಳ ಹಿಂದೆ ಬರೆದಿದ್ದೆ, ಆದರೆ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿರಲಿಲ್ಲ,ಇಂದು ಪ್ರಕಟಿಸುವ ಮನಸಿನಿಂದ ಪ್ರಕಟಿಸುತಿದ್ದೇನೆ, ಈ ಕವಿತೆಯನ್ನು ಕೇಳಿರುವ-ಕಂಡಿರುವ ಸ್ನೇಹಿತರು ವಿನಹ ತಿಳಿಯಬಾರದೆಂದು ಕೇಳಿಕೊಳ್ಳುತೆನೇ...
13 ಕಾಮೆಂಟ್‌ಗಳು:
thanks for visiting my blog sir. my mobile wouldn't support kannada fonts. i will revisit ur blog on a pc and read
ಹಳ್ಳಿಹುಡುಗ ತರುಣ್,
ನಿಮ್ಮ ಕವನ ತುಂಬಾ ಚೆನ್ನಾಗಿದೆ.ಹೆಣ್ಣನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದೀರಿ.
ತರುಣ್ ವರ್ಣನೆ ಚನ್ನಾಗಿದೆ..ನನಗೆ ಮೊದಲ ಕೆಲವು ವರ್ಷ ಬಂದ ಸಮಸ್ಯೆ ನಿಮ್ಮನ್ನೂ ಕಾಡುತ್ತಿದೆ ಎನಿಸುತ್ತೆ...ಗುಲಾಭಿ...ಅಲ್ಲ ಗುಲಾಬಿ..ಹಾಗೇ ಎರಡನೇ ಸಾಲಿನಲ್ಲಿ ಹುಕ್ಕಿಬರುವ ..ಅದು ಉಕ್ಕಿಬರುವ ಆಗಬೇಕಿತ್ತು,.. ಹಾಗೇ ನೀನಿನ್ನೇನಗಲಿಲ್ಲ ಎನ್ನುವುದು ನೀನಿನ್ನೇನಾಗಲಿಲ್ಲ ಎಂದರೆ ಸರಿಯೇನೋ...
ತಪ್ಪು ತಿಳಿಯಬೇಡಿ ...ತಮ್ಮನೆಂದು ತಿಳಿದು ಹೇಳುತ್ತಿದ್ದೇನೆ...
ಕಲ್ಪನೆಯ ರೆಕ್ಕೆಪುಕ್ಕ ಯಥೇಚ್ಛವಾಗಿದೆ ನಿಮ್ಮಲ್ಲಿ ಮುಂದುವರೆಸಿ...ಶುಭಂ
thanks badrinath sir.... nimage samayaviddage hodi anisike tilisi...
thnaks shivu sir...
azad sir tappu tiliyu prasneye illa... nimmantavaru tiddi helidare nammantavaru namma tappu tiliyalu sadya sir.. tammana anta dodda matannu heliddira sir nimage chiraruni sir.. danyavaadagalu...
very nice poem...
keep writing. :)
thanks mukta manasina muktarave nima anisikege..
ಕವಿತೆ ಚನ್ನಾಗಿದೆ ನಿನ್ನ ಮುಂದಿನ "ಪ್ರೀತಿಯ ಕನಸು ಬೆತ್ತಲಾಗುತಿದೆಯೇ ? ಅಥವ ಕತ್ತಲಾಗುತಿದೆಯೇ? ಲೇಖನ ಆದಷ್ಟು ಬೇಗ ಮೋಡಿ ಬರಲಿ
ಬರೇ ಹೆಣ್ಣಿನ ಬಗ್ಗೇ ಬರೆಯುತ್ತೀರಲ್ಲ ತರುಣ್, ಬೇರೆ ಏನೂ ಇಲ್ಲವೇ ? ಕವನ ಚೆನ್ನಾಗಿದೆ, thanks
ತರುಣ್, ಕವನ ತುಂಬಾ ಚೆನ್ನಾಗಿದೆ. ಹೆಣ್ಣನ ವರ್ಣನೆ ನಿಮ್ಮಿಂದ ಕಲಿತುಕೊಳ್ಳಬೇಕು!
Thnka praveen nimma commentsge.. nimma blog ge visit maadidde super agide sir..
ಕಾಮೆಂಟ್ ಪೋಸ್ಟ್ ಮಾಡಿ