ನಾನೇನೆಂದು ವರ್ಣಿಸಲಿ.. ||
ಹುಣ್ಣಿಮೆಯ ಚಂದಿರನು ನಾಚುವಂತ
ನಿನ್ನ ಸುಂದರ ಮೌನವ,
ಅರಳಿದ ತಾವರೆಯು ಮುದುಡುವಂತ
ನಿನ್ನಾ ವಯ್ಯಾರದ ಸ್ಪರ್ಶವ
ನಾನೇನೆಂದು ವರ್ಣಿಸಲಿ ಓ ನಲ್ಲೆ.. ||
ಸಂಗೀತದ ಅಲೆಗಳ ಮೇಲೆ ತೇಲಿ
ಬರುವ ಸುಪ್ರಬಾತದಂತ ನಿನ್ನಾ ಸ್ವರವ,
ಚಿಮ್ಮುವ ಜಲಪಾತದಂತೆ
ಹುಕ್ಕಿಬರುವ ನಿನ್ನ ಮುಗುಳ್ ನಗುವ
ನಾನೇನೆಂದು ವರ್ಣಿಸಲಿ ಓ ನಲ್ಲೆ.. ||
ಕನಸಿನ ಕಲ್ಪನೆಗು ಸಿಲುಕದ
ನಿನ್ನ ಮನಸಿನ ಸೌಂದರ್ಯವ,
ತುಂತುರು ಮಳೆಯ ಹನಿಯಂತೆ
ಮಿಣುಕುವ ನಿನ್ನ ಕಣ್ಣೀನ ರೆಪ್ಪೆಯ
ನಾನೇನೆಂದು ವರ್ಣಿಸಲಿ ಓ ನಲ್ಲೆ.. ||
ಕತ್ತಲೆಯ ಕಾರ್ಮೋಡದಲು ಚಂದಿರನಂತೆ
ಭಾಸವಾಗುವ ನಿನ್ನ ಮೊಗವನು,
ಸಂಪಾದ ತಂಗಾಳಿಯಲ್ಲಿ ಮುಖ
ಮಾಡಿ ಕಣ್ಮುಚ್ಚುತಿಹ ನಿನ್ನಾನಂದವನ್ನು,
ನಾನೇನೆಂದು ವರ್ಣಿಸಲಿ ಓ ನಲ್ಲೆ.. ||
- ಹಳ್ಳಿ ಹುಡುಗ ತರುಣ್
tharunkumar84@gmail.com
5 ಕಾಮೆಂಟ್ಗಳು:
ಕವನ ಸುಂದರವಾಗಿದೆ ಆದರೆ ಕಾಗುಣಿತದಲ್ಲಿ ಕೆಲವು ತಪ್ಪುಗಳಿವೆ, ಹ ಮತ್ತು ಅ ಇವುಗಳ ಬಳಕೆ ಅದಲ್ಲದೆ ಅಲ್ಪಪ್ರಾಣ ಮತ್ತು ಮಹಾಪ್ರಾಣ ಇವುಗಳ ಬಳಕೆಯ ಬಗ್ಗೆ ಲಕ್ಷ್ಯಕೊಡಿ, ನಾವು ಜೀತದಾಳಾಗಿ ಸಾಫ್ಟ್ ವೇರ್ ನಲ್ಲಿ ಕೆಲಸಮಾಡಿದರೂ ಯಾರೂ ಏನೂ ಅಂದುಕೊಳ್ಳುವುದಿಲ್ಲ, ಆದರೆ ಕಾವ್ಯ-ಸಾಹಿತ್ಯದಲ್ಲಿ ತಪ್ಪು ಮಾಡಿದರೆ ಭಾಷಾ ತಜ್ಞರು ಆಕ್ಷೇಪಿಸುತ್ತಾರೆ, ಮತ್ತು ಅದು ಸರಿಯೂ ಅಲ್ಲ. ನಾನು ಹೇಳಿದ್ದಕ್ಕೆ ಬೇಸರಿಸಬಾರದು, ಇದು ನನ್ನ ಅನುಭವದ ಹಿತವಚನ, ಧನ್ಯವಾದಗಳು, ಮುಂದೆ ಸಾಗಲಿ ನಿಮ್ ಗಾಡಿ, ಜೈ ಹೋ!
thanks sir.. kandita hechchu gamana kodtini.. nimma salaheyannu kandita kushi inda swikarisutene sir...
ಚೆನ್ನಾಗಿದೆ..
ಮುಂದೆ ಇನ್ನಸ್ಟು ಕವನಗಳು ಹುಟ್ಟಲಿ..
ಹೀಗೆ ಬರೆಯುತ್ತಿರಿ..
ನಿಮ್ಮವ,
ರಾಘು.
thanks raagru
ಕಾಮೆಂಟ್ ಪೋಸ್ಟ್ ಮಾಡಿ